ಡಾ. ಪ್ರಭಾಕರ್‌ಗೆ “ಹೆಲ್ತ್ ಕೇರ್ ಎಕ್ಸಲೆನ್ಸ್” ರಾಜ್ಯಮಟ್ಟದ ಪ್ರಶಸ್ತಿ

0
45

ಮಂಗಳೂರು: ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಖ್ಯಾತ ಇನ್‌ಟರ್‌ ವೆಂಷನಲ್ ಕಾರ್ಡಿಯೋಲಾಜಿಸ್ಟ್ ರಾದ ಡಾ. ಪ್ರಭಾಕರ್‌ರವರು ಹೃದ್ರೋಗ ಶಾಸ್ತ್ರ ವಿಭಾಗದಲ್ಲಿ ಸಾಧಿಸಿದ ಅಪೂರ್ವ ಸಾಧನೆ, ಸಲ್ಲಿಸಿದ ಅನುಪಮ ಸೇವೆಗಾಗಿ ಬೆಂಗಳೂರು ನಗರ ಮೂಲದ ಏಷ್ಯ ನೆಟ್ ಸುವರ್ಣ ಸುದ್ದಿವಾಹಿನಿಯು ವೈದ್ಯರ ದಿನಾಚರಣೆ ಅಂಗವಾಗಿ ಇತ್ತೀಚಿಗೆ ಹೊಟೇಲ್ ಲಲಿತ್ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ “ಹೆಲ್ತ್ ಕೇರ್ ಎಕ್ಸಲೆನ್ಸ್” ಪ್ರಶಸ್ತಿಯನ್ನು ಪ್ರದಾನ ಮಾಡಿ ಅಭಿನಂದಿಸಲಾಯಿತು.

ಪ್ರಶಸ್ತಿ ಪ್ರಧಾನ ವಿಧಿವಿಧಾನವನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಸದ ಡಾ. ಸುಧಾಕರ್ ಹಾಗೂ ಮಣಿಪಾಲ್ ಆಸ್ಪತ್ರೆಯ ಮುಖ್ಯ ನಿರ್ವಹಣಾ ಅಧಿಕಾರಿ ಡಾ. ಸುದರ್ಶನ್ ಬಳ್ಳಾಲ್ ನೆರವೇರಿಸಿದರು. ವೇದಿಕೆಯಲ್ಲಿ ಖ್ಯಾತ ಪತ್ರಿಕೋದ್ಯಮಿ ರವಿ ಹೆಗ್ಡೆಯವರು ಉಪಸ್ಥಿತರಿದ್ದರು. ಕರಾವಳಿ ಪ್ರದೇಶದಿಂದ ಈ ಪ್ರಶಸ್ತಿಗೆ ಆಯ್ಕೆಯಾದ ಪ್ರಥಮ ವೈದ್ಯರಾಗಿದ್ದಾರೆ.

ಡಾ. ಪ್ರಭಾಕರ್‌ರವರು ಕರಾವಳಿ, ಮಲೆನಾಡು ಪ್ರದೇಶದ ಪ್ರಥಮ ಹಾಗೂ ಹಿರಿಯ ಇನ್‌ಟರ್‌ವೆಂಷನಲ್ ಕರ‍್ಡಾö್ಯಲಾಜಿಸ್ಟ್ ಆಗಿದ್ದು, ಕಳೆದ ೨೫ ವರ್ಷಗಳಿಂದ ಪ್ರಾಮಾಣಿಕ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿದ್ದು, ಸಾವಿರಾರು ಜನರಿಗೆ ಜೀವದಾನ ನೀಡಿದ ಸಾಧನೆ ಮಾಡಿದ್ದಾರೆ.

ಡಾ. ಪ್ರಭಾಕರ್‌ರವರು ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯೋಲಾಜಿ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ಉಚಿತ ಹೃದ್ರೋಗ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದಾರೆ. ಅವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ ಸಂಸ್ತೆಗಳು ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ವಿಶೇಷವಾಗಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ನಗರ ಮೂಲದ ಆರ್ಯಭಟ ಪ್ರಶಸ್ತಿ ಮತ್ತು ವೈದ್ಯರತ್ನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ವರದಿ: ಎಮ್. ವಿ. ಮಲ್ಯ

LEAVE A REPLY

Please enter your comment!
Please enter your name here