ಡಾ. ಸುಮಂಗಲಾ ಮುಮ್ಮಿಗಟ್ಟಿ “ಸುಮಸಿರಿ” ಉತ್ತಮ ಕೃತಿ

0
21

ಲೇಖನ ರಾಯಿ ರಾಜ ಕುಮಾರ

ಆಧುನಿಕ ಹಿಂದಿ ಕಾವ್ಯದ ರಾಷ್ಟ್ರಕವಿ ಮೈಥಿಲಿ ಶರಣಗುಪ್ತರಿಂದ ತೊಡಗಿ ಇಂದಿನ ರಘುವಂಶಿ ತನಕದ ಹಿಂದಿ ಕವಿ ವರ್ಯರುಗಳ ಹಲವಾರು ಕವಿತೆಗಳನ್ನು ಮುಮ್ಮಿಗಟ್ಟಿಯವರು “ಸುಮಸಿರಿ”ಕವನ ಸಂಕಲನದಲ್ಲಿ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಆದರೆ ಎಲ್ಲೂ ಕೂಡ ಅನುವಾದದಂತೆ ಭಾಸವಾಗದ ರೀತಿಯಲ್ಲಿ ಮೂಲ ಸೆಲೆಯ ಕೃತಿಯಂತೆ ಮೂಡಿಬಂದಿದೆ. ಪ್ರತಿ ಕವನದ ಪ್ರಾರಂಭದಲ್ಲಿ ಮೂಲ ಕವಿಗಳ ವಿವರವನ್ನು ನೀಡಿತು ಬಹಳ ಉತ್ತಮ ಪ್ರಯತ್ನವಾಗಿದೆ.

ಮೈಥಿಲಿ ಶರಣರ ಮಾನ, ಅಸ್ಮಿತೆ, ಗೌರವ ಉಳಿಸಿಕೊಂಡು ಸಾಧನೆಗೈಯಲು ನರನಿಗೆ ಹೇಳಿದ ಪರಿ. ಎತ್ತೆತ್ತಲೂ ಪತಂಗದ ಪ್ರೇಮಪಲ್ಲವ. ಚತುರ್ವೇದಿಯವರ ಚುಂಬನ ಶೂಲಕ್ಕೆ ಅನುರಾಗವಾಗಲಿ. ಭಾರತದಲ್ಲಿ ನಂಬಿಕೆ ಅಚಲವಾಗಿರಲಿ. ಜಯ ಶಂಕರ ಪ್ರಸಾದರ ವಿಭುತ್ವ ವಿಭುವಂತೆ ಕಾಣುವುದೊ, ದುಃಖ ಸುಖದ ಸತ್ಯವಾಗಿ ಕಣ್ಣಲಿ ತುಂಬಿರುವುದು.

ನಿರಾಲಾ ರ ಕಲ್ಲು ಒಡೆಯುವವಳ ಚಿತ್ರಣ, ಮನದ ಭಾವನೆ. ಸುಮಿತ್ರಾನಂದನ್ ಪಂತ್ ರ ನೇಗಿಲು, ಕರ್ಮಠ, ಕಲಾಕುಶಲ, ಮೊದಲ ಯಂತ್ರಗಳ ಯಂತ್ರ ಆದರ್ಶ ದಂತಿದೆ. ಸುಭದ್ರ ಕುಮಾರಿ ಚೌಹಾಣ್ ರ ಪ್ರಭುವಲ್ಲಿ ಮನದ ಮಾತು ಅರಿಯಲು ಕೇಳಿದ ಪರಿ ಮನೋಜ್ಞವಾಗಿದೆ. ಬೋಧ ಚಿತ್ರಣ ತೆರೆದಿಟ್ಟಿದೆ. ಜೀವ ತೆತ್ತ ಸಕಲರೂ, ಪರದೇಶಿ-ಹೇ ವಾಯು, ಹಾರಿಸು ಜಗದ ಹೊರಗೆ ಎನ್ನುತಿದೆ. ಆಜ್ಞೇಯರ ಎಷ್ಟು ದೋಣಿಯಲ್ಲಿ ಎಷ್ಟು ಬಾರಿ-ಅಂತ್ಯ ಹೀನ ಸತ್ಯದಂತಿದೆ. ನದಿಯ ದ್ವಿಪಗಳು ಸಂಸ್ಕಾರ ನೀಡಲು ವಿನಂತಿಸುತ್ತಿವೆ. ನಾಗಾರ್ಜುನರ ಎಲ್ಲಕ್ಕೂ ಮೋಡ ಮುಸುಕುವುದನ್ನು ನೋಡಬಹುದು. ಹಾಡು ಮಾರುವವನ ಚಿತ್ರಣ ಕೊಳ್ಳೋರ ಮರ್ಜಿಯಂತೆ ಬದಲಾಗುತ್ತೆ. ಸರ್ವೇಶ್ವರರ ಸೌಂದರ್ಯ ಪ್ರಜ್ಞೆಯ ಶಕ್ತಿ ಸೀಮಿತವಾಗಿದ್ದರೂ, ನನ್ನದು ಎನ್ನುವ ಭಾವನೆ ಸ್ಫುರಿಸುತ್ತದೆ. ರೊಟ್ಟಿಯ ಸ್ವಾದದಲ್ಲಿ ಕೇದಾರನಾಥರು ಸೇರಿ ಹೋದರು. ಇಂದು ಜೈನ್ ಗ್ರಹಸ್ಥಳಾಗಿ ಛಾಯೆಯಲ್ಲಿ ಕ್ಷಯಿಸಿದಂತೆ ಕಂಡುಬರುತ್ತಾರೆ. ಕಾನೂನು ಕ್ರಮದ ಧೂಮಿ ಸುರಕ್ಷತೆಯ ಪ್ರಶ್ನೆಯನ್ನು ಎತ್ತುತ್ತಾರೆ.

ದಡದಲ್ಲಿರುವ ಅಮೃತ ಭಾರತಿ ಸಾಗರದಳದ ಪರ್ವತವನ್ನು ಶೋಧಿಸುತ್ತಾರೆ. ಅಮಿತಾ ಶರ್ಮಾ ಮಹಾನಗರಿಯ ಚಿತ್ರಣವನ್ನು ಪ್ರಸ್ತುತಪಡಿಸಿ ಮೌನವ ಕೇಳುವ ಜನರನ್ನು ಪ್ರಕಟಿಸಿದ್ದಾರೆ. ಕತ್ತಲಲ್ಲು ಕಾತ್ಯಾಯಿನಿ ಹಿಂಜರಿಯುತ್ತಾಳೆ, ಸಮ್ಮತಿಗಾಗಿ ಪರಿತಪಿಸುತ್ತಾಳೆ. ಬಂಜೆಯ ಪಾಡು ನಿಶ ನಿಶಾಂತ್ ರಿಂದ ಹೇಳಲ್ಪಟ್ಟು ಒಪ್ಪಿತಕ್ಕಾಗಿ ಕಾಯುತ್ತಾಳೆ. ಕಟಕಟೆಯಿಂದ ಬಂದ ಅನಾಮಿಕ ಸುಳ್ಳಿನ ಕಂತೆಯನ್ನು ಬಿಚ್ಚಿಟ್ಟ ಬಗ್ಗೆ ಅರುಹುತ್ತಾಳೆ.

ಈ ಪ್ರಕಾರ ಆಧುನಿಕ ಹಿಂದಿ ಕಾವ್ಯದ ಧಾರೆಯಿಂದ ನವ ಸಮಾಜದ ಧಾರೆಯ ತನಕ ಪ್ರತಿ ಹೆಜ್ಜೆಯ ಗುರುತು ಪಡಿ ಮೂಡಿದ ರೀತಿ ಬಹಳ ಸೊಗಸಾಗಿ ಕವನಗಳಲ್ಲಿ ಕಣ್ ತೆರೆದಿವೆ. ಸ್ವತಹ ಭಾವನೆ ತುಂಬಿ ಬರೆದ ಕೃತಿಯಂತೆ ಈ ಅನುವಾದಿತ ಕೃತಿ ಮೂಡಿಬಂದಿರುವುದು ಮುಮ್ಮಗಟ್ಟಿ ಅವರ ಭಾಷಾ ಚತುರತೆಗೆ, ಪ್ರೌಢತೆಗೆ ಸಾಕ್ಷಿಯಂತಿದೆ.
.

LEAVE A REPLY

Please enter your comment!
Please enter your name here