ಮೈಸೂರು ನಗರದ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಕೊಡಮಾಡುವ 2025 ನೇ ಸಾಲಿನ ರಾಜ್ಯ ಮಟ್ಟದ “ಹೊಯ್ಸಳ ಪ್ರಶಸ್ತಿ “ಗಡಿನಾಡಿನ ಕನ್ನಡ ಸೇವೆ “ಯನ್ನು ಪರಿಗಣಿಸಿ ಡಾ. ವಾಮನ್ ರಾವ್ ಬೇಕಲ್ ಇವರನ್ನು ಆರಿಸಲಾಗಿದೆ ಎಂದು ಹೊಯ್ಸಳ ಕನ್ನಡ ಸಂಘ ಅಧ್ಯಕ್ಷರಾದ ಪತ್ರಕರ್ತ, ಸಾಹಿತಿ, ಸಂಘಟಕರಾದ ರಂಗನಾಥ್ ಮೈಸೂರು ತಿಳಿಸಿದ್ದಾರೆ.
ಇದೇ ಬರುವ ಏಪ್ರಿಲ್ 5 ರಂದು ಮೈಸೂರಿನ ನಾದಬ್ರಹ್ಮ ಸಭಾಅಂಗಣದಲ್ಲಿ ಸವಿಗನ್ನಡ ಪತ್ರಿಕೆಯ 26 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಗೌರವ ಸಂಚಾಲಕ ಡಾ. ರಘುರಾಮ್ ವಾಜಪೇಯಿ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಕನ್ನಡ ಭವನ ಮೈಸೂರು ಘಟಕದ ಹಾಗೂ ಎಲ್ಲ ಕನ್ನಡ ಬಂದುಗಳನ್ನು ಭಾಗವಹಿಸುವಂತೆ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ವಿನಂತಿಸಿದ್ದಾರೆ.

