ಕಾಸರಗೋಡು : ಮೋಕ್ತೇಸರಿಕೆಯಿಂದ, ಸಮಾಜದ ಹಿರಿಯ, ಸಮಾನಮನಸ್ಕ ಚಿಂತಕರನ್ನು ಸೇರಿಸಿ ಪರಸ್ಪರ ಆಶಯ ವಿನಿಮಯ ಹಾಗೂ ಚರ್ಚೆಯ ಮುಖಾಂತರ ಪ್ರವರ್ತಿಸಿದರೆ ಮಾತ್ರವೇ ಸಮಾಜ ದ ಅಭಿವೃದ್ಧಿ, ಪ್ರಗತಿ ಸಾಧ್ಯವೆಂದು 1909 ರ ಕಾಲಘಟ್ಟದಲ್ಲಿ ಸಂಘ ಕಟ್ಟಿದವರಲ್ಲಿ ಮೊದಲಿಗರು ಕಾಸರಗೋಡು ಕೊರಕೋಡು, ಪಾಂಗೋಡಿನ ಜಾತಿ ಮೊಕ್ತೇಸರ ನಾಯಕರ ವೆಂಕಟರಮಣಯ್ಯ. ನಾಯಕರ ಸಂಕಲ್ಪಕ್ಕೆ ಅಂದು ಕೈ ಜೋಡಿಸಿದವರಲ್ಲಿ ಪ್ರಮುಖರೆಂದರೆ ಖ್ಯಾತ ಲೇಖಕ ಸಂಶೋಧಕ ಬೇಕಲ ರಾಮನಾಯಕ, ಕುಂಬಳೆ ರಾಮಚಂದ್ರ ಮಾಸ್ಟರ್, ಬೀರಂತಬೈಲ್ ರಾಮಚಂದ್ರ ಮುಂತಾದವರು. ಇವರು ಕೊರಕೋಡು, ಪಾಂಗೋಡಿನ ತನ್ನ ನಿವಾಸ “ನಾಯಕರ ಮನೆ”ಯಲ್ಲಿ ಸಭೆ ಸೇರಿಸಿದ್ದರು. ಅಂದಿನ ಸಭೆಯಲ್ಲಿ 44 ಮಂದಿ ಸದಸ್ಯರು ಭಾಗವಹಿಸಿದ್ದರು. ಎಂದು ದಾಖಲೆಗಳು ಸ್ಪಷ್ಟ ಪಡಿಸುತ್ತಿದೆ ಎಂದು ಡಾ. ವಾಮನ್ ರಾವ್ ಬೇಕಲ್ ಹೇಳಿದರು.
ಇವರು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದ ನವರಾತ್ರಿ ಉತ್ಸವ ಪ್ರಯುಕ್ತ ನಡೆಯುತ್ತಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025.” ರ 26.9.2025 ರಲ್ಲಿ ನಡೆದ “ರಾಮಕ್ಷತ್ರಿಯ ಸಮಾಜ ನಡೆದು ಬಂದ ಹಾದಿ “ಎಂಬ ವಿಷಯದಲ್ಲಿ ನಡೆದ ವಿಚಾರಗೋಷ್ಠಿ ಹಾಗೂ ಸಮಾಜಕ್ಕೆ ಸಂಘ ಕಲ್ಪನೆ ಕೊಟ್ಟ ಪ್ರಾಥಸ್ಮರಣೀಯ “ನಾಯಕರ ವೆಂಕಟರಮಣಯ್ಯ ಸಂಸ್ಮರಣೆ -ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದಾಖಲೆ ಸಹಿತ ಅಭಿಪ್ರಾಯ ಪಟ್ಟರು.
ರಾಮಕ್ಷತ್ರಿಯ ಸಮಾಜದ ಸಮಗ್ರ ಇತಿಹಾಸದ ಬಗ್ಗೆ ಸಂಶೋಧನೆ, ದಾಖಲೀಕರಣ, ಅನುಸ್ಮರಣೆ ಸಂಬಂದಿಸಿದ “ರಾಷ್ಟ್ರೀಯ ವಿಚಾರ ಸಂಕಿರಣ – ವಿಚಾರ ಗೋಷ್ಠಿ ನಡೆಯಬೇಕಿದೆ ಎಂದು ವಿಚಾರ ಮಂಡನೆ ಮಾಡಿದ ಲೇಖಕಿ, ಹಾಗೂ ವಿಶ್ವ ರಾಮಕ್ಷತ್ರಿಯ ಮಹಾಸಂಘ ಸಂಪಾದಕಿ ಶ್ರೀಮತಿ ರೇಖಾ ಸುದೇಶ್ ರಾವ್ ನಿರ್ದೇಶಿಸಿದರು. ರಾಮಕ್ಷತ್ರಿಯ ಸಂಘ ನಡೆದು ಬಂದ ಹಾದಿ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ ಲೇಖಕ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಜಗದೀಶ್ ಕೂಡ್ಲು ಮಾತನಾಡಿ, ಸಂಘಟನೆಯಿಂದ ಮಾತ್ರವೇ ಪ್ರಗತಿ, ಅಭಿವೃದ್ಧಿ ಸಾಧ್ಯವೆಂದು ತಿಳಿದ ಸ್ವಯಂ ಜಾತಿ ಮೊಕ್ತೇಶ್ವರರಾಗಿದ್ದ ನಾಯಕರ ವೆಂಕಟ್ರಮಣಯ್ಯನವರ ದೂರದರ್ಶಿತ್ವ, ಅನುಭವ ಕ್ಕೆ ಅಂದಿನ ಸಮಾನ ಮನಸ್ಕ ಚಿಂತಕರು ಕೈ ಜೋಡಿಸಿದ್ದರು, ಅಂತವರ ಹಾಗೂ ಆಯಾ ಪ್ರದೇಶದ ನಮ್ಮ ಜಾತಿಯನ್ನು ಸಂಘಟಿತ ಅಭಿವೃದ್ಧಿ ಪಥದತ್ತ ಸಾಗಿಸಲು ಪ್ರಯತ್ನ ಪಟ್ಟ ಮಹಾನುಭಾವರ ವ್ಯಕ್ತಿತ್ವ, ವಿಚಾರ ಸಂಶೋಧನೆ ನಡೆಸಿ ದಾಖಲೀಕರಣ ಮಾಡಬೇಕಾದ ಅಗತ್ಯತೆಯ ಬಗ್ಗೆ ಆಹ್ವಾನ ಮಾಡಿದರು. ಇದು ಮುಂದಿನ ತಲೆಮಾರಿಗೆ ನೀಡುವ ಕೊಡುಗೆಯಾಗಬಹುದು. ಸಂಘಟನೆಯ ಮುಂದಾಳತ್ವ ವಹಿಸುವವರು, ಜಾತಿ ಇತಿಹಾಸದ ಬಗ್ಗೆ ಅಧ್ಯಯನ ಮಾಡಿ ವಿಷಯ ಗ್ರಹಣ, ಮನವರಿಕೆ ಮಾಡಿಕೊಂಡಿದ್ದರೆ ಮಾತ್ರ ಮುಂದಿನ ಯುವ ತಲೆಮಾರಿಗೆ ತಿಳುವಳಿಕೆ ಬಿತ್ತರಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಗೌರವ ಅಧ್ಯಕ್ಷ ಕೆ. ನಿರಂಜನ್ ಕೊರಕ್ಕೊಡು ಅವರು ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಹಾಗೂ ನಾಯಕರ ವೆಂಕಟ್ರಮಣಯ್ಯ ಯಾನೆ ಜಟೆನಾಯಕರ ಭಾವ ಚಿತ್ರಕ್ಕೆ ಹಾರಾರ್ಪಣೆ ಮಾಡಿದರು. ಪಾಂಗೋಡು ಕ್ಷೇತ್ರ ಪಾತ್ರಿ ಹಾಗೂ ಸಾಂಸ್ಕೃತಿಕ ಘಟಕ ಅಧ್ಯಕ್ಷರಾದ ಪಾಂಗೋಡು ಪ್ರವೀಣ್ ನಾಯಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಿ. ಜೆ. ಪಿ. ದ. ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಮಂಜುಳಾ ಅನಿಲ್ ರಾವ್, ದ. ಕ. ಕನ್ನಡ ಭವನ ಜಿಲ್ಲಾ ಕಾರ್ಯಧ್ಯಕ್ಷರಾದ ಉಮೇಶ್ ರಾವ್ ಕುಂಬಳೆ, ರಾಮರಾಜ ಕ್ಷತ್ರಿಯ ಜಿಲ್ಲಾ ಮಹಿಳಾ ಸಂಘ ಗೌರವ ಅಧ್ಯಕ್ಷೆ ಆಶಾ ರಾಧಾಕೃಷ್ಣ, ಜಿಲ್ಲಾ ಸಂಘ ಉಪಾಧ್ಯಕ್ಷೆ ಉಷಾ ಕಿರಣ್, ಕನ್ನಡ ಭವನ ಪ್ರಕಾಶನ ಮುಖ್ಯರಸ್ತೆ ಸಂದ್ಯಾ ರಾಣಿ ಟೀಚರ್. ಕನ್ನಡ ಭವನ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ, ಪಾಂಗೋಡು ಕ್ಷೇತ್ರ ಸಮಿತಿ ಜತೆ ಕಾರ್ಯದರ್ಶಿ ಪ್ರದೀಪ್ ನಾಯಕ್ ನಾಗರಕಟ್ಟೆ ಮುಂತಾದವರು ಭಿಕ್ಷು ಲಕ್ಶ್ಮನಾನಂದ ಹಾಗೂ ನಾಯಕರ ವೆಂಕಟರಮಣಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ವಿಚಾರ ಗೋಷ್ಠಿಯಲ್ಲಿ ಅಭಿಪ್ರಾಯ ಮಂಡನೆ ಮಾಡಿದರು. ಸಮಾಜಮುಕೀ ಚಿಂತಕರ, ಮಾರ್ಗದರ್ಶಕರ, ಅನೇಕ ಆಗಿ ಹೋದ ಗಣ್ಯ ವ್ಯಕ್ತಿಗಳ ಮಾಹಿತಿ ಹಾಗೂ ರಾಮಕ್ಷತ್ರಿಯ ಸಮುದಾಯದ ಬಗ್ಗೆ ನಿಖರ ಪೂರ್ವೇತಿಹಾಸ ನಿಖರ ಇತಿಹಾಸ ಕಲೆಹಾಕುವ ನಿಟ್ಟಿನಲ್ಲಿ “ರಾಷ್ಟ್ರೀಯ ವಿಚಾರ ಸಂಕಿರಣ ” ಏರ್ಪಡಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಸಂದ್ಯಾ ರಾಣಿ ಟೀಚರ್ ಸ್ವಾಗತಿಸಿ, ರಾಜೇಶ್ ಕೋಟೆಕಣಿ ವಂದಿಸಿದರು. ಉಷಾ ಕಿರಣ್ ಕಾರ್ಯಕ್ರಮ ನಿರೂಪಿಸಿದರು.
Home Uncategorized ಸಂಘಟನೆಯಿಂದ ಮಾತ್ರವೇ ಸಮಾಜದ ಅಭಿವೃದ್ಧಿ, ಪ್ರಗತಿ ಸಾಧ್ಯವೆಂದು ಸಂಘ ಕಟ್ಟಿದವರಲ್ಲಿ ಕಾಸರಗೋಡಿನ ನಾಯಕರ ವೆಂಕಟರಮಣಯ್ಯ ಮೊದಲಿಗರು-...