ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಯೋಗೀಶ್ ಕೈರೋಡಿ ಅವರು ಬರೆದಿರುವ ಅಭಯ ರಾಣಿ – ವೀರರಾಣಿ ಕೃತಿಯು ನಿನ್ನೆ ಮಂಗಳವಾರ ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಂಡಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಅಭಯ ರಾಣಿ – ವೀರರಾಣಿ ಅಬ್ಬಕ್ಕ@೫೦೦ ಸಮಾರೋಪ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಕೃತಿ ಬಿಡುಗಡೆಗೊಂಡಿದ್ದು, ಸಮಾರಂಭದಲ್ಲಿ ಸಾಹಿತಿ ಡಾ. ಯೋಗೀಶ್ ಕೈರೋಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇವರು ಈಗಾಗಲೇ ಹಲವಾರು ಪುಸ್ತಕ, ಕೃತಿಗಳನ್ನು ಬರೆದಿದ್ದಾರೆ.