ನಾಟಕಗಳು ಜೀವನದಲ್ಲಿ ಸುಧಾರಣೆಯನ್ನು ತರಬಲ್ಲವು:ಎಂ.ಎಸ್. ನಾಗರಾಜಪ್ಪ

0
9


ದಾವಣಗೆರೆ: ಮನುಷ್ಯನಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿ ಜೀವನದಲ್ಲಿ ಸುಧಾರಣೆಯನ್ನು ತರಬಲ್ಲ ಶಕ್ತಿ ನಾಟಕ ಕಲೆಗಿದೆ. ನೈಜವಾದ ಕಲೆ ಜನರ ಮನಸ್ಸಿಗೆ ಹತ್ತಿರವಾದಾಗ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪುತ್ತದೆ, ಸುಧಾರಣೆ ಹಾಗೂ ಬದಲಾವಣೆಗೆ ರಂಗಭೂಮಿ ಪ್ರಾಮುಖ್ಯವೆನಿಸಿದೆ ಎಂದು ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಗೌರವಾಧ್ಯಕ್ಷ ಎಂ.ಎಸ್. ನಾಗರಾಜಪ್ಪ ತಿಳಿಸಿದರು.
ನಗರದ ಕು.ವೆಂ.ಪು. ಕನ್ನಡ ಭವನದಲ್ಲಿ, ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ, ಆಶಕ್ತ ಕಲಾವಿದರ ಸಹಾಯಾರ್ಥವಾಗಿ ಹಮ್ಮಿಕೊಂಡಿದ್ದ “ಯಾರದೀ ಬುರುಡೆ” ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲೆ ಮಾನವನ ಬದುಕಿನ ಅವಿಭಾಜ್ಯ ಅಂಗ, ಕಲೆ ಇಲ್ಲದೆ ಇಂದು ಮನುಜನ ಬದುಕು ಇಲ್ಲ, ಕಲೆ- ಸಂಸ್ಕೃತಿ ದೇಶೀಯ ನಾಗರೀಕತೆಯನ್ನು ಕಾಪಾಡುವ ಪ್ರಭಲ ಸಾಧನಗಳಾಗಿವೆ. ಸಾಂಸ್ಕೃತಿಕ ಶ್ರೀಮಂತಿಕೆ ತುಂಬಿದ ನಮ್ಮ ನಾಡಿನಲ್ಲಿ ಕಲಾ ಪ್ರಕಾರಗಳು ಹಾಗೂ ಕಲಾವಿದರು ಸಾಕಷ್ಟಿದ್ದಾರೆ, ಆದರೆ ಅವರ ಪ್ರತಿಭೆ ಅನಾವರಣಕ್ಕೆ ಸಾಕಷ್ಟು ಅವಕಾಶಗಳು ದೊರಕದಿರುವುದು ಆತಂಕದ ಸಂಗತಿ, ಸಂಘ-ಸAಸ್ಥೆಗಳು, ಸರಕಾರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸುವುದರ ಮೂಲಕ ಕಲೆ- ಸಂಸ್ಕೃತಿಯನ್ನು ಉಳಿಸಿ- ಬೆಳೆಸಬೇಕೆಂದು ಹೇಳಿದರು.
ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಐರಣಿ, ಸಾಹಿತಿ ಎಸ್. ಸಿದ್ದೇಶ್ ಕುರ್ಕಿ, ಭಜನಾ ಕಲಾವಿದ ಬಿಳಿಚೋಡು ಪರಮೇಶ್ವರಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಾಪೂಜಿ ಇಂಜಿನಿಯರಿAಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ. ಎನ್. ಜಗದೀಶ್ ರವರಿಗೆ “ಸಾಮಾಜಿಕ ಸೇವಾರತ್ನ” ಹಾಗೂ ಭಜನೆ ಕಲಾವಿದ ಮಲ್ಲೇಶಪ್ಪ ಅವರಿಗೆ “ಕಲಾ ಸಿರಿ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು, ಮಮತಾ ಸಿ. ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು, ಎನ್.ಎಸ್. ರಾಜು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here