ಮುಲ್ಕಿ:ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆ ಕೆರಕಾಡಿಗೆ ಕುಡಿಯುವ ನೀರು ಶುದ್ಧೀಕರಣ ಘಟಕ ಕೊಡುಗೆಯಾಗಿ ನೀಡಲಾಯಿತು. ಅಧ್ಯಕ್ಷರಾದ ಲಯನ್ ಅನಿಲ್ ಕುಮಾರ್ ಯಂತ್ರವನ್ನು ಉದ್ಘಾಟಿಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆರೋಗ್ಯದ ದೃಷ್ಟಿಯಿಂದ ಶುದ್ಧನ ಕುಡಿಯುವ ನೀರಿನ ಅಗತ್ಯವಿದ್ದು ನಮ್ಮ ಸಂಸ್ಥೆ ಈ ಯಂತ್ರದ ಕೊಡುಗೆಯನ್ನು ನೀಡಿದೆ ಎಂದರು ಲಯನ್ಸ್ ಕ್ಲಬ್ ಇನ್ಸ್ಪೈರ್ ಬಪ್ಪನಾಡಿನ ಸ್ಥಾಪಕ ಅಧ್ಯಕ್ಷರಾದ ಲ. ವೆಂಕಟೇಶ್ ಹೆಬ್ಬಾರ್, ಪ್ರತಿಭಾ ಹೆಬ್ಬಾರ್, ಪುಷ್ಪ ರಾಜ ಚೌಟ, ಬಿ ಶಿವಪ್ರಸಾದ್ ,ಸುಧೀರ್ ಏನ್ ಬಾಳಿಗ ,ಪ್ರಣವ ಶರ್ಮ, ಪ್ರತಿಭಾ ಹೆಬ್ಬಾರ್, ಮುಖ್ಯೋಪಾಧ್ಯಾಯರಾದ ನವೀನ್ ಉಪಸ್ಥಿತರಿದ್ದರು

