ಕುಡುಪು ಗುಂಪು ಹಲ್ಲೆ : ಆರೋಪಿಗಳಿಗೆ ಜಾಮೀನು

0
48

ಮೂಡುಬಿದಿರೆ: ಏಪ್ರಿಲ್ 27ರಂದು ಕುಡುಪು ಬಳಿ ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ್ದಾರೆಂಬ ಆರೋಪದಲ್ಲಿ ಕೇರಳ ಮೂಲದ ಅಶ್ರಫ್ ಎಂಬವರ ಮೇಲೆ ಗುಂಪು ಹಲ್ಲೆ ಮಾಡಿ ಕೊಲೆ ನಡೆಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ದ.ಕ ಜಿಲ್ಲಾ ಸೆಶನ್ಸ್ ಕೋರ್ಟ್ ಜಾಮೀನು ನೀಡಿದೆ.

ಮಂಗಳೂರು ಗ್ರಾಮಮಾಂತರ ಪೊಲೀಸರು ಪ್ರಕರಣ ದಾಖಲಿಸುವಲ್ಲಿ ವಿಳಂಬವಾಗಿರುವುದು ಹಾಗೂ ದೂರಿನಲ್ಲಿದ್ದ ವ್ಯತ್ಯಾಸದ ಅಂಶಗಳನ್ನು ವಿಚಾರಣೆ ವೇಳೆ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಪ್ರಕರಣದ ತನಿಖಾ ಹಂತದಲ್ಲಿ ಪೊಲೀಸರ ಕಾರ್ಯವೈಖರಿಯಲ್ಲಿ ಲೋಪವಾಗಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸಹಿತ ಮೂವರನ್ನು ಪೊಲೀಸ್ ಕಮಿಷನರ್‌ ಅಮಾನತು ಮಾಡಿದ್ದರು.

ಕೋರ್ಟ್ ನಲ್ಲಿ ಆರೋಪಿ ಸುಶಾಂತ್ ಪರ ಮೂಡಬಿದ್ರೆಯ ಖ್ಯಾತ ಯುವ ನ್ಯಾಯವಾದಿ ಶರತ್ ಡಿ ಶೆಟ್ಟಿ ವಾದಿಸಿದರೆ ರಾಹುಲ್ ಪರ ಮಂಗಳೂರಿನ ವಿಶಾಲ್ ಶೆಟ್ಟಿ ವಾದಿಸಿದ್ದರು.

LEAVE A REPLY

Please enter your comment!
Please enter your name here