ದುಬೈ : ಯುಎಇಯಲ್ಲಿ ಇರುವ ಎಲ್ಲಾ ಗಡಿನಾಡಿನ ಹಾಗೂ ಕರುನಾಡಿನ ಕನ್ನಡಿಗರನ್ನು ಒಟ್ಟುಗೂಡಿಸಿ “ದುಬೈ ಗಡಿನಾಡ ಉತ್ಸವ -2025″ವನ್ನು ಅದ್ದೂರಿಯಾಗಿ ಆಚರಿಸುವ ಹಾಗೂ ಈ ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ಮೂಡಿಬರಲಿ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಗಲ್ಫ್ ನ ಅಧ್ಯಕ್ಷರಾದ ಅಶ್ರಫ್ ಶಾ ಮಾಂತುರು ರವರು ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಾ ಶುಭವನ್ನು ಹಾರೈಸಿದರು.

ಅಕ್ಟೋಬರ್ 25 ರಂದು ಸಂಜೆ ನಾಲ್ಕರಿಂದ ರಾತ್ರಿ ಹನ್ನೊಂದರ ವರೆಗೆ ಔದ್ ಮೇಥದ ಗ್ಲೆಂಡೇಲ್ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ನಡೆಯುವ ನಾಲ್ಕನೇ ವರ್ಷದ “ದುಬೈ ಗಡಿನಾಡ ಉತ್ಸವ -2025” ದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದುಬೈ ಘಟಕದ ಅಮರ್ ದೀಪ್ ಕಲ್ಲುರಾಯರವರು ಮಾತನಾಡುತ್ತಾ ಕಳೆದ ಮೂರು ವರ್ಷಗಳಿಂದ ದುಬೈನಲ್ಲಿ ಗಡಿನಾಡ ಉತ್ಸವ ಆಚರಿಸುವ ಮೂಲಕ ನಮ್ಮ ಗಡಿನಾಡಿನ ಕಲೆ,ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸುತಿದ್ದೆವೆ.ಈ ವರ್ಷ ನಮ್ಮ ನಾಲ್ಕನೇ ವರ್ಷದ ಕಾರ್ಯಕ್ರಮ ಯುಎಇಯಲ್ಲಿ ಇರುವ ಎಲ್ಲಾ ಕನ್ನಡಿಗರೂ ಈ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉದ್ಯಮಿ ಮಂಜುನಾಥ ರಾಜನ್,ದುಬೈಯ ಅಚ್ಚ ಕನ್ನಡ ನಿರೂಪಕಿ ಶ್ರೀಮತಿ ಆರತಿ ಅಡಿಗ,ಶಾರ್ಜಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ನೊಯಲ್ ಅಲ್ಮೇಡಾರವರು ಅಕ್ಟೋಬರ್ 25 ರಂದು ನಡೆಯುವ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಘಟಕದ ಪದಾಧಿಕಾರಿಗಳಾದ ಸುಗಂದರಾಜ್ ಬೇಕಲ್, ಮಂಜುನಾಥ ಕಾಸರಗೋಡು, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ಯೂಸುಫ್ ಶೇಣಿ, ಅಶ್ರಫ್ ಪಿ.ಪಿ. ಬಾಯರ್,ಬಾಬ ಬಾಜೂರಿ,ಅನೀಶ್ ಅಡಪ ಮಡಂದೂರು, ರಾಮಚಂದ್ರ ಬೆದ್ರಡ್ಕ, ಆಶೀಕ್ ಮಿಯಾ, ಮನ್ಸೂರ್ ಮರ್ಥ್ಯ ಉಪಸ್ಥಿತರಿದ್ದರು.
ಕಾರ್ಯದರ್ಶಿ ಬಾಬ ಬಾಜೂರಿ ಸ್ವಾಗತಿಸಿ, ಅಶ್ರಫ್ ಪಿ.ಪಿ.ಬಾಯರ್ ಧನ್ಯವಾದವಿತ್ತರು.