ದುಬೈನಲ್ಲಿ ಅಂತಾರಾಷ್ಟ್ರೀಯ ಜಾನಪದ ಉತ್ಸವ-2025

0
88

ದುಬೈ : “ನಮ್ಮ ನಾಡಿನ ಜಾನಪದ ಸಂಸ್ಕೃತಿಯನ್ನು ಉಳಿಸುವಂತ ಕೆಲಸ ಕರ್ನಾಟಕ ಜಾನಪದ ಪರಿಷತ್ ಯುಎಇ ಘಟಕದ ಮೂಲಕ ನಡೆಯಲಿ ಹಾಗೂ ಈ ಘಟಕ ನಿಂತ ನೀರಾಗಬಾರದು ನಿರಂತರ ಹರಿಯುವ ನದಿಯಾಗಲಿ” ಎಂದು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಕರ್ನಾಟಕ ಜಾನಪದ ಪರಿಷತ್ ಯುಎಇ ಘಟಕದ ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಘಟಕದ ಅಧ್ಯಕ್ಷರಾದ ಸಾಧನ್ ದಾಸ್ ರವರ ತಂಡದಲ್ಲಿ ಕಾರ್ಯಕ್ರಮ ಸಂಘಟನೆ ಮಾಡಿದ ಸಂಘಟಕರು ಇರುವಾಗ ಯುಎಇಯಲ್ಲಿ ವರ್ಷ ವರ್ಷಕ್ಕೆ ಅದ್ದೂರಿಯ ಜಾನಪದ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಗಳು ನಡೆಸಿಕೊಂಡು ಬರಲಿ” ಎಂದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಕರ್ನಾಟಕ ಜಾನಪದ ಪರಿಷತ್ ಯುಎಇ ಘಟಕದ ವತಿಯಿಂದ ಅಕ್ಟೋಬರ್ ಏಳರಂದು ನಗರದ ನಾದ್ ಅಲ್ ಶೀಬಾ ಜಿಮ್ಸ್ ಮಾರ್ಡನ್ ಅಕಾಡೆಮಿಯಲ್ಲಿ ಬೆಳಿಗ್ಗೆ ಗಂಟೆ ಹತ್ತರಿಂದ ಸಂಜೆಯ ವರೆಗೆ ಜರುಗಿದ “ಅಂತಾರಾಷ್ಟ್ರೀಯ ಜಾನಪದ ಉತ್ಸವ-25” ಊರಿಂದ ಆಗಮಿಸಿದ ವಿವಿಧ ಜಾನಪದ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉದ್ಘಾಟನಾ ಸಭಾ ವೇದಿಕೆಯಲ್ಲಿ ಯುಎಇ ಘಟಕದ ನೂತನ ಅಧ್ಯಕ್ಷರಾದ ಸದನ್ ದಾಸ್ ರವರಿಗೆ ಜಾನಪದ ಪರಿಷತ್ ನ ಬೆಂಗಳೂರಿನ ಅಧ್ಯಕ್ಷರಾದ ಪ್ರೊ.ಹಿ.ಚಿ.ಬೊರಲಿಂಗಯ್ಯರವರು ಹಾಗೂ ನೂತನ ಪದಾಧಿಕಾರಿಗಳಿಗೆ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಅಧ್ಯಕ್ಷರಾದ ಸದನ್ ದಾಸ್ ಪ್ರಮಾಣ ವಚನ ಬೋಧಿಸಿದರು.ಜಾನಪದ ಪರಿಷತ್ ನ ಮ್ಯಾನೇಜಿಂಗ್ ಟ್ರಸ್ಟ್ ಆದಿತ್ಯ ನಂಜರಾಜ್ ಘಟಕದ ಲೋಗೋವನ್ನು ಲೋಕಾರ್ಪಣೆಗೊಳಿಸಿದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮ
“ಇಂತಹ ಜಾನಪದ ಉತ್ಸವ ಕಾರ್ಯಕ್ರಮ ಇದು ಒಂದು ದಿನದ ಕಾರ್ಯಕ್ರಮ ಮಾತ್ರ ಅಲ್ಲ.ಇದು ಕರ್ನಾಟಕ ರಾಜ್ಯದ ಪರಂಪರೆ,ಆಚರಣೆ, ಸಂಸ್ಕೃತಿಯನ್ನು ಭವಿಷ್ಯದ ಜನರಿಗೆ ವರ್ಗಾಯಿಸುವ ಕಾರ್ಯಕ್ರಮವಾಗಬೇಕು.ಈ ರೀತಿಯ ಕಾರ್ಯಕ್ರಮಗಳಿಗೆ ತಂದೆ ತಾಯಂದಿರು ಮಕ್ಕಳನ್ನು ಕರೆದುಕೊಂಡು ಬಂದರೆ ನಮ್ಮ ಜಾನಪದ ಸಂಸ್ಕೃತಿಗೆ ಪರಂಪರೆಗೆ ಮುಂದೆ ಭವಿಷ್ಯ ಇದೆ.ಮಕ್ಕಳಿಗೆ ಶಿಕ್ಷಣದ ಜೊತೆಗೆ ಈ ರೀತಿಯ ಕಲೆಗಳನ್ನು ಕಲಿಸುವುದು ತಾಯಂದಿರ ದೊಡ್ಡ ಮಟ್ಟದ ಜವಾಬ್ದಾರಿ” ಎಂದು ಕರ್ನಾಟಕ ಸರಕಾರದ ವಿಧಾನ ಸಭಾ ಅಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ರವರು ಮಧ್ಯಾಹ್ನ ನಡೆದ ಪ್ರಶಸ್ತಿ ಪ್ರದಾನ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಇವತ್ತು ದುಬೈನಲ್ಲಿ ಪ್ರಥಮ ಜಾನಪದ ಉತ್ಸವವಾದರು ಇನ್ನೂ ಮುಂದೆಯೂ ಇಂತಹ ದುಬೈನಲ್ಲಿ ನಡೆಯುತ ಇರಲಿ ಹಾಗೂ ಇಂತಹ ಕಾರ್ಯಕ್ರಮಕ್ಕೆ ಸರಕಾರ ಗುರುತಿಸಿಕೊಂಡು ಆತ್ಮವಿಶ್ವಾಸ ತುಂಬುವ ಪೊತ್ಸಹ ಧನ ಕೊಡುವ ಕಾರ್ಯಕ್ಕೆ ಇದಕ್ಕೆ ಸಂಬಂಧಪಟ್ಟ ಮಂತ್ರಿಗಳಲ್ಲಿ ಮಾತನಾಡುತ್ತೆನೆ” ಎಂದು ಭರವಸೆಯ ಮಾತುಗಳನ್ನು ಆಡಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುಎಇಯ ಹಿರಿಯ ಉದ್ಯಮಿ ಡಾ.ಬಿ.ಆರ್.ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಜಾನಪದ ಪರಿಷತ್ ಬೆಂಗಳೂರಿನ ಅಧ್ಯಕ್ಷರಾದ ಪ್ರೊ.ಹಿ.ಚಿ.ಬೊರಲಿಂಗಯ್ಯ, ಕರ್ನಾಟಕ ಜಾನಪದ ಪರಿಷತ್ ನ ಮ್ಯಾನೇಜಿಂಗ್ ಟ್ರಸ್ಟ್ ಆದಿತ್ಯ ನಂಜೆರಾಜ,ಉಡುಪಿಯ ಉದ್ಯಮಿ ಗೋವಿಂದ ಬಾಬು ಪೂಜಾರಿ, ಭಾರತೀಯ ರಾಯಭಾರಿಯ ಕಛೆರಿಯ ಬ್ರೀಜೆಂದ್ರ ಸಿಂಗ್, ಯುಎಇಯ ಸಿನಿಮಾ ನಟ ಅಬ್ದುಲ್ಲಾ ಅಲ್ ಝಫಾಲೀ, ಉದ್ಯಮಿ ಜೊಲ್ಲೆ ಜಬ್ಬಾರ್,ಅಜ್ಮಾನ್ ಬ್ಯಾಂಕ್ ಮುಖ್ಯಸ್ಥರಾದ ಅಮಲ್ ಅಬ್ದುಲ್ಲಾ,ಯುಎಇ ಘಟಕದ ಕಾರ್ಯಾಧ್ಯಕ್ಷರಾದ ಅಶ್ರಫ್ ಶಾ ಮಾಂತುರು ರವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
“ಡಾ.ಎಚ್.ಎಲ್.ನಾಗೇಗೌಡ ಅಂತಾರಾಷ್ಟ್ರೀಯ ಜಾನಪದ ಪ್ರಶಸ್ತಿ”ಯನ್ನು ಹಿರಿಯ ಪ್ರಸಿದ್ಧ ಜಾನಪದ ಕಲಾವಿದರಾದ ಶ್ರೀಮತಿ ರಾಣಿ ಮಾಚಯ್ಯ(ಕೊಡಗು) ಮತ್ತು ಮಲವಳಿ ಮಹಾದೇವ ಸ್ವಾಮಿ(ಮೈಸೂರು) ರವರಿಗೆ ನೀಡಿ ಗೌರವಿಸಲಾಯಿತು.ಸಾಹಿತಿ ಪ್ರೊ.ಕೆ.ಇ.ರಾಧಕೃಷ್ಣರವರಿಗೆ ಗುರು ಸವ್ಯಸಾಚಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಧನ್ ದಾಸ್ ಶಿರುರುರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ.ವಿ.ಕನಕರಾಜ, ಮಂಜುನಾಥ ರಾಜನ್, ಇಬ್ರಾಹಿಂ ಖಲೀಲ್ ಅರಿಮಲ, ಪ್ರದಾನ ಕಾರ್ಯದರ್ಶಿ ಶ್ರೀಮತಿ ಆರತಿ ಅಡಿಗ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕರ್ನಾಟಕದಿಂದ ಆಗಮಿಸಿದ ತಂಡಗಳಿಂದ ಮತ್ತು ಯುಎಇಯ ತಂಡಗಳಿಂದ ವಿವಿಧ ಜಾನಪದ ಕಾರ್ಯಕ್ರಮಗಳು ನಡೆಯಿತು.
ಘಟಕದ ಪದಾಧಿಕಾರಿಗಳಾದ ದಿನೇಶ್ ಶೆಟ್ಟಿ ಕೊಟ್ಟಿಂಜ,ನೋಯಲ್ ಅಲ್ಮೇಡಾ,ಬಾ.ವಿಜಯ ಗುಜ್ಜರ್, ಶ್ರೀಮತಿ ಜಶ್ಮೀತ ವಿವೇಕಾನಂದ, ವಿನೀತ್ ರಾಜ್ ಎರೆಗೋಡು,ಶಂಕರ ಬಬಲೇಶ್ವರ, ಭಾಗ್ಯರಾಜ್ ರಾವ್,ಗಣಪತಿ ಭಟ್,ವಾಸು ಕುಮಾರ್ ಶೆಟ್ಟಿ, ಜೋಸೆಫ್ ಮಥಯಾಸ್, ವಿವೇಕ್ ಆನಂದ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಜಗನ್ನಾಥ ಬೆಳ್ಳಾರೆ, ಅಬ್ದುಲ್ ಹಕೀಮ್,ಸುಗಂದರಾಜ್ ಬೇಕಲ್, ಚೇತನ್ ಕುಮಾರ್ ಸುಬ್ರಹ್ಮಣ್ಯ, ಶ್ರೀ ಕೃಷ್ಣ ಮುಲುಗುಂಡು,ಖಾಂತ ಕೃಷ್ಣೆಗೌಡ, ವಿನಾಯಕ ಹೆಗ್ಡೆ, ಸಂತೋಷ್ ಶೆಟ್ಟಿ ಪೊಳಲಿ, ಅರುಣ್ ಕುಮಾರ್,ರವಿ ನಾಗೂರು, ವೆಂಕಟರಮಣ ಕಾಮತ್ ರವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.
ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಅಂತಾರಾಷ್ಟ್ರೀಯ ಜಾನಪದ ಉತ್ಸವದ ನಿರ್ದೇಶಕರಾದ ಬಾಸುಮ ಕೊಡಗು, ಯುಎಇ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಆರತಿ ಅಡಿಗ,ಘಟಕದ ಪದಾಧಿಕಾರಿ ವಿಘ್ನೇಶ್ ಕುಂದಾಪುರ ಅಚ್ಚುಕಟ್ಟಾಗಿ ನಿರೂಪಿಸಿದರು.
🖋 ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

LEAVE A REPLY

Please enter your comment!
Please enter your name here