ದುಬೈ : ಯುಎಇ ಬಂಟ್ಸ್ ನ 48 ನೇ ವರ್ಷದ “ಭಾವೈಕ್ಯ” ಬಂಟರ ಮಹಾಸಮಾಗಮ

0
54

ಡಿ. 14 :ನಗರದ ಶೇಖ್ ಝಯೀದ್ ರಸ್ತೆಯ ಮಿಲೆನಿಯಂ ಪ್ಲಾಜಾ ಹೋಟೆಲ್ ಡೌನ್ ಟೌನ್ ಹೋಟೆಲ್ (ಹಳೆಯ ಕ್ರೌನ್ ಪ್ಲಾಜಾ) ನ ಸಭಾಂಗಣದಲ್ಲಿ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಆರು ಗಂಟೆಯ ವರೆಗೆ ಯುಎಇ ಬಂಟರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ : ಯುಎಇ ಬಂಟ ಬಾಂಧವರಿಂದ ತುಳುನಾಡ ಮಣ್ಣ್ ದ ಮಹಿಮೆ, ಭಾರತದ‌ ಸಂಸ್ಕೃತಿಯ ಪಯಣ, ಬಂಟೆರ್ನ ಐಸಿರ, ಕಿರುಚಿತ್ರ ಸ್ಪರ್ಧೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.
ಬಂಟ ವಿಭೂಷಣ ಪ್ರಶಸ್ತಿ ಪ್ರದಾನ : ವರ್ಷಂಪ್ರತಿ ಕೊಡಮಾಡುವ ಯುಎಇ ಬಂಟರ ಪ್ರತಿಷ್ಠಿತ ಬಂಟ ವಿಭೂಷಣ ಪ್ರಶಸ್ತಿಯನ್ನು ಮಂಗಳೂರು ಕಂಬಳದ ರೂವಾರಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ನೀಡಿ ಗೌರವಿಸಲಾಗುವುದು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುಎಇ ಬಂಟ್ಸ್ ಮಹಾ ಪೋಷಕರಾದ ಡಾ.ಬಿ.ಆರ್ ಶೆಟ್ಟಿ, ಕನ್ನಡ ಚಿತ್ರರಂಗದ ನಟ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ, ಬಾಲಿವುಡ್ ನಟ ವಿವೇಕ್ ಒಬೆರಾಯ್ ರವರು ಆಗಮಿಸಲಿದ್ದಾರೆ.ಕಾರ್ಯಕ್ರಮದ ಪೂರ್ಣ ನಿರೂಪಣೆಯನ್ನು ಚಿತ್ರನಟ ಸಾಯಿಲ್ ರೈ ಮತ್ತು ನಯನ ಶೆಟ್ಟಿಯವರು ಮಾಡಲಿದ್ದಾರೆ.
ಯುಎಇಯಲ್ಲಿ ಇರುವ ಎಲ್ಲಾ ಬಂಟ ಬಾಂಧವರು 48 ನೇ ವರ್ಷದ ಬಂಟರ ಮಹಾಸಮಾಗಮದಲ್ಲಿ ಭಾಗವಹಿಸಬೇಕೆಂದು , ಹಾಗೂ ಬೆಳಿಗ್ಗೆ ಹತ್ತು ಗಂಟೆಯ ಒಳಗೆ ಆಗಮಿಸಿದವರಿಗೆ ಉಚಿತ ಪ್ರವೇಶ ಮತ್ತು ಎಂಟು ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಇದೆ ಎಂದು ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಯುಎಇ ಬಂಟ್ಸ್ ನ ಪೋಷಕರಾದ ಸರ್ವೋತ್ತಮ ಶೆಟ್ಟಿ,ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು 2025 ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

🖋 ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ

LEAVE A REPLY

Please enter your comment!
Please enter your name here