ದುಬೈನ ಗ್ಲೋಬಲ್ ವಿಲೇಜ್ ನಲ್ಲಿ ಕೆ.ಜಿ.ಎಫ್ ಖ್ಯಾತಿಯ ಚಂದ್ರಮೌಳಿ ನಿರ್ದೇಶನದ ನಾಯಕ ನಟ ಶಿಥಿಲ್ ಪೂಜಾರಿ ಹಾಗು ನಾಯಕಿ ನಟಿ ನಿಮಿಕಾ ರತ್ನಾಕರ್ ಅಭಿನಯದ ,ವೈಲ್ಡ್ ಟೈಗರ್ ಸಫಾರಿ ಕನ್ನಡ ಚಲನ ಚಿತ್ರದ ಟೀಸರ್ ಲಾಂಚ್‌ಗೆ ಮುಖ್ಯ ಅಥಿತಿಯಾಗಿ ಮಿಸಸ್ ಇಂಡಿಯಾ ಕರ್ನಾಟಕ ದ ಮಂಗಳೂರು ವಿನ್ನರ್ ಹಾಗು ನ್ಯಾಷನಲ್ ಲೆವೆಲ್ ಕ್ರೌನ್ ವಿನ್ನರ್ ತಶ್ಮ ಚೇತನ್ ಅವರು ಭಾಗವಹಿಸಿದ್ದರು.
ಖ್ಯಾತ ನೃತ್ಯ ನಿರ್ದೇಶಕರಾದ ರೆಮೋ ಡಿಸೂಜಾ ಮತ್ತು ಧರ್ಮೇಶ್ ಯೆಳಂದೆ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡ ಅನುಭವವನ್ನು ಚಿತ್ರತಂಡದ ಸದಸ್ಯರು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ‘ವೈಲ್ಡ್ ಟೈಗರ್ ಸಫಾರಿ’ ಚಿತ್ರದ ಟೀಸರ್ ಪ್ರದರ್ಶಿಸಲಾಗಿದ್ದು, ಅದನ್ನು ನೋಡಿ ರೆಮೋ ಸರ್ ಹಾಗೂ ಧರ್ಮೇಶ್ ಸರ್ ಚಿತ್ರತಂಡವನ್ನು ಮೆಚ್ಚಿ ಶುಭ ಹಾರೈಸಿದ್ದಾರೆ.
ಟೀಸರ್‌ಗೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಚಿತ್ರತಂಡದಲ್ಲಿ ಹೊಸ ಉತ್ಸಾಹ ಮೂಡಿದ್ದು, ‘ವೈಲ್ಡ್ ಟೈಗರ್ ಸಫಾರಿ’ ಶೀಘ್ರದಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ ಎಂದು ತಿಳಿಸಲಾಗಿದೆ. ರೆಮೋ ಡಿಸೂಜಾ ಮತ್ತು ಧರ್ಮೇಶ್ ಯೆಳಂದೆ ಅವರಂತಹ ಖ್ಯಾತ ಕಲಾವಿದರಿಂದ ಶುಭಾಶಯಗಳು ದೊರೆತಿರುವುದು ತಂಡಕ್ಕೆ ನಿಜಕ್ಕೂ ಸ್ಮರಣೀಯ ಕ್ಷಣವಾಗಿದ್ದು, ಇದು ದೊಡ್ಡ ಪ್ರೇರಣೆಯಾಗಿದೆ ಎಂದು ಚಿತ್ರತಂಡ ಹೇಳಿದೆ.
‘ವೈಲ್ಡ್ ಟೈಗರ್ ಸಫಾರಿ’ ಚಿತ್ರತಂಡಕ್ಕೆ ಶುಭ ಹಾರೈಸುತ್ತೇವೆ, ಚಿತ್ರವು ಭರ್ಜರಿ ಯಶಸ್ಸು ಗಳಿಸಲಿ ಎಂದು ಈ ವೇಳೆ ಅವರು ಆಶಿಸಿದರು.


