“ವಿದ್ಯಾರ್ಥಿಗಳು ಜೀವನದಲ್ಲಿಒಂದು ನಿರ್ದಿಷ್ಟಗುರಿಯನ್ನುಇಟ್ಟುಕೊಂಡು ಸಾಧಕರಾಗಬೇಕು.ಒಬ್ಬ ವಿದ್ಯಾರ್ಥಿ ತನ್ನ ಜೀವನವನ್ನು ರೂಪಿಸಿಕೊಳ್ಳಬೇಕಾದರೆ , ಅದಕ್ಕೆಉತ್ತಮ ವಾತವರಣ ಬೇಕು.ಅಂತಹಅತ್ಯುತ್ತಮ ವ್ಯಾಸಂಗದ ವಾತವರಣವನ್ನುಎಕ್ಸಲೆಂಟ್ ವಿದ್ಯಾಸಂಸ್ಥೆ ನೀಡುತ್ತಿದೆ.ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಜೀವನದಉತ್ತುಂಗ ಶಿಖರವನ್ನು ತಲುಪಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ” ಎಂದು ಬೆಂಗಳೂರಿನ ಸೂಪರಿಂಟೆಂಡೆಟ್ ಆಫ್ ಪೊಲೀಸ್ ಸ್ಟೇಟ್ ಇಂಟಲಿಜೆನ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಮೋದ್ಕುಮಾರ್ ಬಿ. ಇವರುಅಭಿಪ್ರಾಯ ಪಟ್ಟರು.ಮೂಡುಬಿದಿರೆಯಎಕ್ಸಲೆಂಟ್ ಆಂಗ್ಲ ಮಾದ್ಯಮ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು “ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು.ಪೋಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ವಿದ್ಯಾಭ್ಯಾಸವನ್ನು ಕೊಡಿಸಬೇಕು.ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಿಮ್ಮ ಮಕ್ಕಳು ಸುರಕ್ಷಿತವಾಗಿ ಅತ್ಯುತ್ತಮ ಶಿಕ್ಷಣ ಪಡೆಯುತ್ತಿದ್ದಾರೆ ಸಮಾಜದಲ್ಲಿಧನಾತ್ಮಕ ಚಿಂತನೆಗಳಿಗಿಂತ ಋಣಾತ್ಮಕ ಚಿಂತನೆಗಳೇ ಹೆಚ್ಚು ಆದರೆ ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಗಳಿಗೆ ಹೆಚ್ಚು ಒತ್ತು ನೀಡಬೇಕು.ಯಾವುದೇಒಂದುದೊಡ್ಡ ವಿದ್ಯಾಸಂಸ್ಥೆಗಳನ್ನು ಮುನ್ನಡೆಸುವಾಗ ವ್ಯವಸ್ಥೆಗಳಲ್ಲಿ ಸಣ್ಣ ಪುಟ್ಟ ಲೋಪಗಳಿರಬಹುದು ಆದರೆ ವಿದ್ಯಾರ್ಥಿಗಳು ಅದರ ಕಡೆಗೆ ಗಮನ ಕೊಡದೆ ನಿಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ ಸಾಧನೆಯನ್ನು ಮಾಡಬೇಕು.ಕಠಿಣ ವ್ಯವಸ್ಥೆಗಳಿಗೆ ಹೊಂದಿಕೊಂಡಾಗಲೇ ಸಾಧನೆ ಸಾಧ್ಯ. ಹಾಗೇಯೇ ಆರಾಮದಾಯ ಕಜೀವನದಿಂದ ಹೊರಗೆ ಬಂದರೆಸಾಧನೆ ಕಟ್ಟಿಟ್ಟಬುತ್ತಿ. ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆ ನೀಡುತ್ತಿದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಯಶಸ್ಸಿನ ಶಿಖರವನ್ನು ತಲುಪಬೇಕುಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಆಗಮಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್ ಜಿ ಎಸ್ ಮಾತನಾಡಿ “ತಂದೆಯ ಬೆವರಿನ ಶ್ರಮ ತಾಯಿಯ ಅಕ್ಕರೆಗೆಯಾವತ್ತೂ ಬೆಲೆ ಕಟ್ಟಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳನ್ನೇ ಮಾದರಿಯಾಗಿಟ್ಟುಕೊಂಡು ಜೀವನದಲ್ಲಿ ಯಶಸ್ಸನ್ನು ಸಂಪಾದಿಸಿಕೊಳ್ಳಬೇಕು. ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು ಹಾಗೂ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು. ಕನಸುಗಳನ್ನು ಬೆನ್ನಟ್ಟಿದಾಗ ಸಾಧನೆ ಸಾಧ್ಯ. ಸತತ ಅಭ್ಯಾಸ ಪರಿಶ್ರಮ ಜೊತೆಯಲ್ಲಿದ್ದರೆ ಯಶಸ್ಸಿನ ಸಮೀಪಕ್ಕೆ ತಲುಪಬಹುದು.ಮಕ್ಕಳ ಕನಸುಗಳಿಗೆ ಪೋಷಕರು ಸಹಕಾರ ನೀಡಬೇಕು.ನಿಮ್ಮ ಯೋಚನೆಗಳೇ ನಿಮ್ಮನ್ನು ಸಾಧನೆಯೆಡೆಗೆ ಕೊಂಡೊಯ್ಯುತ್ತವೆ. ಆದ್ದರಿಂದಯಾವಾಗಲೂ ಧನಾತ್ಮಕ ಚಿಂತನೆಗಳನ್ನೆ ಮೈಗೂಡಿಸಿ.ಇದು ನಡವಳಿಕೆಗಳಿಂದ ಸಾಧ್ಯ.ಅಂತಹ ನಡವಳಿಕೆಯನ್ನು ವಿದ್ಯಾರ್ಥಿಗಳು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ಉಡುಪಿ ಜಿಲ್ಲೆಯ ಸಾಮಜಿಕ ಸೇವಾ ಅಧಿಕಾರಿ ರಕ್ಷಿತ್ಜೈನ್ ಮಾತನಾಡಿ “ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮತ್ತೊಂದು ಸಿದ್ಧವನ ಗುರುಕುಲ ಎಂದು ಹೇಳಿದರೆ ತಪ್ಪಾಗಲಾರದು. ಅಂತಹ ಶಿಸ್ತು, ಶಿಕ್ಷಣ ವಾತವರಣ ಈ ವಿದ್ಯಾಸಂಸ್ಥೆಯಲ್ಲಿ ಸಿಗ್ತಾ ಇದೆ.ಇಂತಹ ಶೈಕ್ಷಣಿಕ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರು.ಜ್ಞಾನ, ಇಚ್ಛೆ, ಕ್ರಿಯಾಶಕ್ತಿ ಇದ್ದಾಗ ಜೀವನದಲ್ಲಿ ಏನಾನ್ನಾದರೂ ಸಾಧಿಸಬಹುದು ಇದಕ್ಕೆ ನಿದರ್ಶನವಾಗಿ ಸಂಸ್ಥೆಯ ಅಧ್ಯಕ್ಷ ಯುವರಾಜ್ಜೈನ್ ಅವರ ಚಿಂತನೆಯಲ್ಲಿ ಕಲಿಯುತ್ತಿರುವ ನೀವೇ ಭಾಗ್ಯವಂತರು” ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
2021-22 ನೇ ಸಾಲಿನಲ್ಲಿ 925 ಕ್ಕೆ 925 ಅಂಕಗಳನ್ನು ಪಡೆದುಕೊಂಡ ಸಂಸ್ಥೆಗೆ ಕೀರ್ತಿತಂದು ಪದವಿ ಪೂರ್ವ ಶಿಕ್ಷಣದಲ್ಲಿಯೂ ಅತ್ಯುತ್ತಮ ಅಂಕಗಳಿದ NEET ವಿಭಾಗದಲ್ಲಿ ರಾಷ್ಟç ಮಟ್ಟದಲ್ಲಿ ಸಾಧನೆ ಮಾಡಿ ಇಂದು ಬೆಂಗಳೂರಿನ ಪ್ರತಿಷ್ಠಿತ BMC ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಸಂಸ್ಥೆಯ ಹಳೆಯ ವಿದ್ಯಾರ್ಥಿ ಶಶಿಭೂಷಣ್ ಮಾತನಾಡಿ “ಇಲ್ಲಿ ಕಲಿಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಲ್ಲಿಲ್ಲದ ಅತ್ಯುತ್ತಮ ಶಿಕ್ಷಣವನ್ನು ಪಡೆಯುತ್ತ್ತಿದ್ದಾರೆ. ಇಲ್ಲಿನ ಶೈಕ್ಷಣಿಕ ವ್ಯವಸ್ಥೆ, ಶಿಸ್ತು, ಉಪನ್ಯಾಸಕರ ಲಭ್ಯತೆ ತರಗತಿಗಳು ನಿರಂತರ ಅಭ್ಯಾಸದಿಂದ ನಾನು ರಾಷ್ಟಿಯ ಮಟ್ಟದಲ್ಲಿ ಅತ್ಯುನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ವಿದ್ಯಾರ್ಥಿಗಳಿಗೆ ಸಹಜತೆಯ ಶಿಕ್ಷಣವನ್ನು ಕೊಡುವುದು ನಮ್ಮ ಉದ್ದೇಶವಾಗಿದೆ.ನಮ್ಮ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅವರು ಮುಖ್ಯವಾಗಿ ಜೀವನದಲ್ಲಿ ಹೇಗೆ ಇರಬೇಕುಎಂಬುದನ್ನು ಕಲಿಯುತ್ತಿದ್ದಾರೆ ಶೈಕ್ಷಣಿಕವಾಗಿ ಮಾತ್ರವಲ್ಲದೇಎಲ್ಲಾ ನೈತಿಕಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನುತಾವು ತೊಡಗಿಸಿಕೊಂಡು ಸಾಧನೆ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯಅಧ್ಯಕ್ಷರಾದ ಯುವರಾಜ್ಜೈನ್ ಮಾತನಾಡಿ “ವರ್ಷಕೊಮ್ಮೆ ನಡೆಯುವ ಈ ವಾರ್ಷಿಕೋತ್ಸವ ವಿದ್ಯಾರ್ಥಿಗಳ ಪ್ರತಿಭೆಯನ್ನುಗುರುತಿಸುವ ಸಂತೋಷ ಪಡಿಸುವ ಹಬ್ಬವಾಗಿದೆ.ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜೀವನ ಶೈಲಿಯನ್ನು ಹೇಳಿಕೊಡಲಾಗುತ್ತಿದೆ.ಇಲ್ಲಿ ಸಿಗುವ ಶಿಕ್ಷಣದಿಂದ ನಮ್ಮ ವಿದ್ಯಾರ್ಥಿಗಳು ರಾಷ್ಟಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.ಸತತಅಭ್ಯಾಸ ಪರಿಶ್ರಮದ ಜೊತೆ ಗುರುಗಳಿಗೆ, ಹೆತ್ತವರಿಗೆ ಪ್ರತಿ ದಿನ ನಮಿಸುತ್ತಾ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಯಶಸ್ಸನ್ನು ಸುಲಭವಾಗಿ ಸಂಪಾದಿಸಿಕೊಳ್ಳಬಹುದು. ವಿದ್ಯಾರ್ಥಿಗಳುಇಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡರೆ ಜೀವನದಲ್ಲಿ ಎಲ್ಲೇ ಹೋದರೂ ಬದುಕಬಹುದು. ಮಕ್ಕಳು ತಪ್ಪು ಮಾಡಿದಾಗಅದನ್ನುತಿದ್ದುವ ಕೆಲಸ ಇಲ್ಲಿನ ಶಿಕ್ಷಕರು ಮಾಡುತ್ತಿದ್ದಾರೆ ಪ್ರತಿದಿನ ಪ್ರತಿ ಕ್ಷಣ ಅವರ ಚಲನವಲನಗಳ ಕಡೆಗೆ ಇಲ್ಲಿ ಗಮನ ಹರಿಸಲಾಗುತ್ತದೆ ಈ ಮೂಲಕ ವಿದ್ಯಾರ್ಥಿಗಳು ಪ್ರಪಂಚದಲ್ಲಿ ಸಾಧನೆಯಗರಿಯನ್ನುತಲುಪುವಂತೆ ಮಾಡುವುದೇ ನಮ್ಮಉದ್ದೇಶವಾಗಿದೆ” ಎಂದರು.
ಇದೇ ಸಂದರ್ಭದಲ್ಲಿ 2024-25 ನೇ ಸಾಲಿನಲ್ಲಿ SSLC ವಾರ್ಷಿಕ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥ ರ್ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿತಂದ ವಿದ್ಯಾರ್ಥಿನಿ ಸಾನಿಧ್ಯರಾವ್ ಸೇರಿದಂತೆ ಅಗ್ರ ಹತ್ತರ್ಯಾಂಕ್ಗಳನ್ನು ಪಡೆದ 14 ಮಂದಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ 600 ಕ್ಕೂ ಅಧಿಕ ಅಂಕಗಳನ್ನು ಪಡೆದ 45 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸಂಸ್ಥೆಯ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಾಧನೆತೋರಿದ ವಿದ್ಯಾರ್ಥಿಗಳನ್ನು ಗೌರವಿಸಿ ಗುರುತಿಸಲಾಯಿತು.
ಇದೇ ಸಂದರ್ಣದಲ್ಲಿ ಕರ್ನಾಟಕರಾಜ್ಯ ಎಸ್ ಡಿ ಎಂಸಿ ಸಮನ್ವಯ ಕೇಂದ್ರದವರು ಕೊಡಮಾಡಲ್ಪಡುವ ಮಕ್ಕಳ ಸ್ನೇಹಿ ಶಿಕ್ಷಕ ಪುರಸ್ಕçತ ಸಂಸ್ಥೆಯಚಿತ್ರಕಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು.ಉಪ ಮುಖ್ಯಉಪಧ್ಯಾಯರಾದ ಜಯಶೀಲ ಸ್ವಾಗತಿಸಿದರು. ವಿದ್ಯಾರ್ಥಿನಾಯಕ ಹಿತೇಶ್ಗೌಡ ವಂದಿಸಿದರು. ಶಿಕ್ಷಕಿ ವೆನೆಸ್ಸಾ ನೊರೋನ್ಹಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ಹರ್ಷಿತಾ ಎಸ್, ಶ್ರೀಮತಿ ಜಯಲಕ್ಮಿ಼, ಕುಮಾರಿ ಶರ್ಮಿತಾ, ಶ್ರೀಮತಿ ಸ್ವರ್ಣಲತಾ ಸಾಧಕರ ವಿವರಗಳನ್ನು ವಾಚಿಸಿದರು.
ಸಭಾಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿಶೇಷ ಮನೋರಂಜನಕಾರ್ಯಕ್ರಮ ಜರುಗಿದವು.

