ಬೆಳ್ಳಂಬೆಳಗ್ಗೆಯೇ ಇಡಿ ಶಾಕ್! ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆ ಸೇರಿದಂತೆ 5 ಕಡೆ ದಾಳಿ

0
116

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಗೆ ಜಾರಿ ನಿರ್ದೇಶನಾಲಯ ಗುರುವಾರ ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದೆ. ಸುಬ್ಬಾರೆಡ್ಡಿ ಮನೆಗಳು ಸೇರಿದಂತೆ ಬೆಂಗಳೂರಿನ 5 ಕಡೆ ಇಡಿ ದಾಳಿ ನಡೆದಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದಡಿ ದಾಳಿ ನಡೆಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

 ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ  ಮನೆಗಳ ಮೇಲೆ ಸೇರಿದಂತೆ ಒಟ್ಟು ಬೆಂಗಳೂರಿನ  5 ಕಡೆಗಳಲ್ಲಿ ಗುರುವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ  ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಮತ್ತು ಸಂಬಂಧಿಕರಿಗೆ ಸೇರಿದ ಮನೆಗಳಲ್ಲಿ ಶೋಧ ನಡೆಯುತ್ತಿದೆ. ಸುಬ್ಬಾರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್​ ಶಾಸಕರಾಗಿದ್ದು, ಇವರ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಅದರ ಅನ್ವಯ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಾಸಕ ಸುಬ್ಬಾರೆಡ್ಡಿ ಕುಟುಂಬ ಸದಸ್ಯರು ಹೊಂದಿರುವ ವಿದೇಶಿ ಆಸ್ತಿ ಮತ್ತು ಅವರ ಉದ್ಯಮ ಪಾಲುದಾರರಿಗೆ ಸೇರಿದ ಆಸ್ತಿ ಸಂಬಂಧ ದಾಳಿ ನಡೆದಿದೆ. ವಿದೇಶಗಳಲ್ಲಿನ ಬ್ಯಾಂಕ್​ ಅಕೌಂಟ್​​, ವಿದೇಶ ವ್ಯವಹಾರದಲ್ಲಿ ಹೂಡಿಕೆ ವಿಚಾರವಾಗಿ ಶೋಧ ನಡೆಸಲಾಗುತ್ತಿದೆ. ಸುಬ್ಬಾರೆಡ್ಡಿ ಮಲೇಷ್ಯಾ, ಹಾಂಕಾಂಗ್​​, ಜರ್ಮನಿಯಲ್ಲಿ ಆಸ್ತಿ ಹೊಂದಿದ್ದಾರೆ.

LEAVE A REPLY

Please enter your comment!
Please enter your name here