“ಶಿಕ್ಷಿತ ಮಹಿಳೆ : ಸಮಾಜ ಪರಿವರ್ತನೆಯ ಪ್ರೇರಕ ಶಕ್ತಿ” – ಸ್ವಾಮಿ ಯುಗೇಶಾನಂದಜಿ

0
8

ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತೊಂದನೇ ಉಪನ್ಯಾಸ

ಸ್ವಾಮಿ ವಿವೇಕಾನಂದರು ಮಹಿಳೆಯರನ್ನು ಸಮಾಜದ ನಿಜವಾದ ಶಕ್ತಿ ಎಂದು ಪರಿಗಣಿಸಿದರು. ಅವರದೃಷ್ಟಿಯಲ್ಲಿ ಮಹಿಳೆ ವಿದ್ಯಾವಂತಳಾದಾಗ, ಒಂದುಕುಟುಂಬ ಮಾತ್ರವಲ್ಲ -ಸಂಪೂರ್ಣ ಸಮಾಜ ಜಾಗೃತಿಯಾಗುತ್ತದೆ . ಮಹಿಳೆಯರುಮೌಲ್ಯಾಧಾರಿತ ಶಿಕ್ಷಣ ಪಡೆದುಕೊಂಡಾಗ , ಜವಾಬ್ದಾರಿಯುತ ನಾಗರಿಕರೂ ಆಗುತ್ತಾರೆ.
ಶಿಕ್ಷಣ ಮಹಿಳೆಯರಿಗೆ ಜ್ಞಾನ ಮಾತ್ರವಲ್ಲ , ನಿರ್ಣಯ ಸಾಮರ್ಥ್ಯ, ಧೈರ್ಯ, ಸ್ವಾವಲಂಬನೆ, ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನುನೀಡುತ್ತದೆ . ಅವರುಕುಟುಂಬದ ಮೊದಲ ಗುರುವಾಗಿರುವುದರಿಂದ , ಮಕ್ಕಳಲ್ಲಿ ಸಂಸ್ಕಾರ, ಶಿಸ್ತು, ಮತ್ತು ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ . ಮಹಿಳೆ ಶಿಕ್ಷಣ ಪಡೆದಾಗ , ಆ ಮನೆಯ ವಾತಾವರಣ ಜಾಗೃತಿಯಾಗುತ್ತದೆ ; ಆ ಮನೆಯಜಾಗೃತಿ ಸಮಾಜದಜಾಗೃತಿಗೆ ದಾರಿ ಮಾಡುತ್ತದೆ . ಇಂದಿನ ಯುಗದಲ್ಲಿ ಮಹಿಳೆಯರು ವಿಜ್ಞಾನ , ಶಿಕ್ಷಣ, ಆಡಳಿತ , ತಂತ್ರಜ್ಞಾನ – ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸ್ವಾಮಿವಿವೇಕಾನಂದರು ಹೇಳಿದಂತೆ , “ಮಹಿಳೆಯರಪ್ರಗತಿಯನ್ನು ನಿರಾಕರಿಸಿದ ಸಮಾಜಎಂದಿಗೂ ಮುಂದುವರಿಯಲಾರದು.” ಆದ್ದರಿಂದ, ಮಹಿಳೆಯರಿಗೆ ಸಮಾನ ಶಿಕ್ಷಣ, ಸಮಾನ ಅವಕಾಶ, ಮತ್ತು ಸಮಾನಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ . ಶಿಕ್ಷಣ ಪಡೆದ ಮಹಿಳೆ ಕೇವಲ ತನ್ನ ಜೀವನವನ್ನೇ ಅಲ್ಲ , ಅನೇಕ ಜೀವಗಳನ್ನು ಬೆಳಗುವ ಶಕ್ತಿ ಹೊಂದಿದ್ದಾಳೆ .ಎಂದು ಮಂಗಳೂರಿನ ರಾಮಕೃಷ್ಣ ಮಿಷನ್‌ ಬಾಲಕಾಶ್ರಮದ ಮುಖ್ಯಸ್ಥರಾಗಿರುವ ಸ್ವಾಮಿಯುಗೇಶಾನಂದಜಿ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತೊಂದನೇಉಪನ್ಯಾಸದಲ್ಲಿ “ಶಿಕ್ಷಿತ ಮಹಿಳೆ –ಶಕ್ತಿಶಾಲಿಸಮಾಜ : ವಿವೇಕಾನಂದರಆದರ್ಶ”ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಈ ಕಾರ್ಯಕ್ರಮವು ಮಂಗಳೂರು ಬಲ್ಮಠದ ,ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಜರುಗಿತು.

ಈ ಸಂದರ್ಭದಲ್ಲಿ,ಮಂಗಳೂರು ಬಲ್ಮಠದ ,ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಗದೀಶ ಬಾಳ , ಡಾ . ಮಂಜುಳಾ ಮಲ್ಯ ಎಂ . ಸಹಾಯಕ ಪ್ರಾಧ್ಯಾಪಕರು ಮತ್ತು IQAC ಸಂಯೋಜಕರು ಮತ್ತು ಶ್ರೀಮತಿ ಚಂದ್ರಿಕಾ ಸಹಾಯಕ ಪ್ರಾಧ್ಯಾಪಕರು ಮತ್ತು IQAC ಸಹ ಸಂಯೋಜಕರು ಹಾಗೂಶ್ರೀಮತಿ ಜಯಶ್ರೀ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಮತ್ತು ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ವಿದ್ಯಾರ್ಥಿನಿಯಾದ ಸುನಿತಾ ವಂದಿಸಿದರು. ವಿದ್ಯಾರ್ಥಿನಿಯಾದ ಸುಕನ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here