ಕೈಕಂಬ: ಶಿಕ್ಷಣದಿಂದ ಸಾಮಾಜಿಕ ಕೌಶಲ್ಯ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ, ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲ್ಯ ಬೆಳೆಸಲು ಸಹಾಯ ಮಾಡುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಶಂಕರ್ ಮಾಸ್ಟರ್ ರವರು ಹೇಳಿದರು.
ಅವರು ಕೈಕಂಬದ ಮುಂಡಾಲ ಸಮಾಜ (ರಿ) ಆಯೋಜಿಸಿದ್ದ ಆಟಿ ತಿಂಗಳ ಆಟ – ಊಟ – ಕೂಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಅವರು ಮಾತನಾಡುತ್ತಾ, ಶಿಕ್ಷಣದಿಂದ ಸೃಜನಶೀಲತೆ ಸೃಷ್ಟಿಯಾಗುತ್ತದೆ. ಇದರಿಂದ ಮುಂಡಾಲ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೋನಪ್ಪ ಅದ್ಯಪಾಡಿರವರು ಮಾತನಾಡುತ್ತಾ, ಮುಂಡಾಲ ಯುವಜನರು ಸ್ವ – ಉದ್ಯೋಗಿಗಳಾಗಿ, ಉಳಿತಾಯದ ಮನೋಭಾವನೆಯನ್ನು ಬೆಳೆಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ವೇದಿಕೆಯಲ್ಲಿ ಮುಂಡಾಲ ಸಮಾಜ (ರಿ) ಗುರುಪುರ ಕೈಕಂಬ. ಇದರ ಅಧ್ಯಕ್ಷರಾದ ಜಯಂತ್ ಕೊಳಂಬೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉದಯ್ ಆರ್ ರಾವ್, ಸುನೀಲ್ ಅದ್ಯಪಾಡಿ, ಮಹೇಶ್ ಅಮೀನ್ ಮುಲ್ಲಕಾಡ್, ಕೃಷ್ಣ ಕುಳಾಯಿ,ಮಾಲತಿ ಅದ್ಯಪಾಡಿ, ವಿಜಯಾ ಗೋಪಾಲ್ ಸುವರ್ಣ, ಕವಿತಾ, ರವಿ ಪಂಪ್ ವೆಲ್, ಶಿಶಿರ್ ಶೆಟ್ಟಿ ಪಡ್ಡೋಡಿ ಗುತ್ತುರವರು ಉಪಸ್ಥಿತರಿದ್ದರು.
ಜಯಂತ್ ಮಾಸ್ಟರ್ ಪ್ರಸ್ತಾವಿಸಿದರು. ವಿನೀತ್ ಕೈಕಂಬ ಪ್ರಾರ್ಥಿಸಿದರು, ಕು. ಅಕ್ಷತಾ ಸ್ವಾಗತಿಸಿದರು, ವಿಠಲ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.