ಬೆಳ್ತಂಗಡಿ: ಶಿಕ್ಷಣ ಪ್ರೇಮಿ, ಸಮಾಜಸೇವಕ , ನಾರಾವಿ ಗ್ರಾಮಪಂಚಾಯತಿನ ಮಾಜಿ ಸದಸ್ಯ ಕುತ್ಲೂರು ನಿವಾಸಿ ಕುಕ್ಕುಜೆ ರಾಮಚಂದ್ರ ಭಟ್ ಅವರು ಇಂದು (ಆ 29 ರಂದು) ಬೆಳಿಗ್ಗೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಲೋ ಬಿಪಿಯಿಂದಾಗಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆವೇಳೆಗೆ ಅವರು ಮೃತಪಟ್ಟಿದ್ದರು. ಕುತ್ಲೂರು ಸರಕಾರಿ ಶಾಲೆಯ ಎಸ್.ಡಿ.ಎಂ ಸಿ ಅಧ್ಯಕ್ಷರಾಗಿ ಶಾಲೆ ರಾಷ್ಟ್ರ ಮಟ್ಟದಲ್ಲಿಯೇ ಗುರಿತಿಸುವಂತೆ ಮಾಡಿದ್ದರು. ಇವರ ನೇತೃತ್ವದಲ್ಲಿ ಇತ್ತೀಚೆಗಷ್ಟೆ ಕುತ್ಲೂರು ಶಾಲೆಯ ಮಕ್ಕಳು ಮುಖ್ಯಮಂತ್ರಿ ಅವರನ್ನು ಬೇಟಿಯಾಗಿದ್ದರು. ಶಾಲೆಗೆ ವಿವಿಧ ಸಂಘ ಸಂಸ್ಥೆಗಳಿಂದ ಅನುದಾನಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ರಾಮಚಂದ್ರ ಭಟ್ ಅವರ ಅಕಾಲಿಕ ನಿಧನದಿಂದ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ ಉಂಟಾಗಿದೆ. ಅವರು ಪತ್ನಿ ಪ್ರಮೀಳ ಭಟ್ ಹಾಗೂ ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.