ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ ಎ ನಂದಗೋಪಾಲ ಶೆಣೈಯವರ ನೇತೃತ್ವದಲ್ಲಿ ಕೊಂಕಣಿ ಶಿಕ್ಷಣಾಸಕ್ತರ ನಿಯೋಗವು ಮಾನ್ಯ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಹೊಸ ದ್ವಿಭಾಷಾ ನೀತಿಯಿಂದ ತೃತೀಯ ಭಾಷೆ ಕೊಂಕಣಿ ಕಲಿಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕೆಂದು, ಮುಖ್ಯಮಂತ್ರಿಯವರನ್ನು ಉದ್ದೇಶಿಸಿ ಮನವಿಯನ್ನು ಸಲ್ಲಿಸಿದರು.
ನಿಯೋಗದಲ್ಲಿ ಉಪಾಧ್ಯಕ್ಷರಾದ ಡಿ. ರಮೇಶ ನಾಯಕ, ಕಾರ್ಯದರ್ಶಿ ಡಾ ಕಸ್ತೂರಿ ಮೋಹನ ಪೈ, ಕೋಶಾಧಿಕಾರಿ ಬಿ ಆರ್ ಭಟ್, ಸಿ ಎ ಒ ಡಾ ಬಿ ದೇವದಾಸ ಪೈ, ಎಂ ಆರ್ ಕಾಮತ್, ಪ್ರಭಾ ಭಟ್, ಮೋಹನದಾಸ್ ಪೈ, ರಾಧಿಕಾ ಪೈ, ಉಷಾ ಮೋಹನ ಪೈ, ವಿದ್ಯಾ ಪೈ, ಶಾಂಭವಿ ಮೊದಲಾದವರು ಇದ್ದರು.

