ವಿಶ್ವ ಕೊಂಕಣಿ ಕೇಂದ್ರದಲ್ಲಿ ಎಂಟನೇ ಬಾರಿ “ಸಿ. ಎ. ಪವರ್-25” ಸಿ ಎ ಇಂಟರಮೀಡಿಯೇಟ್ ಸನಿವಾಸ ತರಬೇತಿ ಶಿಬಿರ

0
8

ಸಿ.ಎ. ಪವರ್ 25- ಸಿ.ಎ ಇಂಟರ್   ಸೀಸನ್ -8  ಶಿಬಿರದ ಉದ್ಘಾಟನಾ ಸಮಾರಂಭ  ದಿ. 11-03-2026  ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು. 

“ಸಿ.ಎ. ಪವರ್ 25”   ಯುವಕರಲ್ಲಿ ಸಿ.ಎ. ಪರೀಕ್ಷಾಪೂರ್ವ ತರಬೇತಿ ಆತ್ಮವಿಶ್ವಾಸ ಬೆಳೆಸುವ, ಹಾಗೂ  ಆಸಕ್ತರಿಗೆ ಮುಕ್ತವಾಗಿರುವ, ವಿಶಿಷ್ಟ  ರೀತಿಯ ತರಬೇತಿಯಾಗಿದೆ.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈ ತರಬೇತಿ ಶಿಬಿರವನ್ನು ದೀಪಬೆಳಗಿಸಿ ಉದ್ಘಾಟಿಸಿ ಅತಿಥಿಗಳನ್ನು ಸ್ವಾಗತಿಸುತ್ತಾ, ತ್ರಿಶಾ ಸಂಸ್ಥೆಯು ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸಿ ಪೂರ್ಣ ಪ್ರೊತ್ಸಾಹ ನೀಡುತ್ತಿದೆ. ಈ ಶಿಬಿರವು ಸಿ.ಎ. ಕಲಿಯುವ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದ್ದು ಆತ್ಮವಿಶ್ವಾಸ ಹಾಗೂ ನಿರಂತರ ಅಭ್ಯಾಸದಿಂದ ಸಂಪೂರ್ಣ ಸದುಪಯೋಗ ಪಡೆದು ಯಶ ಪಡೆಯಬೇಕು ಎಂದು ಶುಭ ಹಾರೈಸಿದರು.

ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಸ್ಥಾಪಕ ಹಾಗೂ ಮುಖ್ಯ ಆಡಳಿತ ಅಧಿಕಾರಿ ಸಿಎ ಗೋಪಾಲ ಕೃಷ್ಣ ಭಟ್ ಅವರು ಸಿ.ಎ. ಪರೀಕ್ಷೆಗಳನ್ನು ಎದುರಿಸಲು ಪರೀಕ್ಷಾರ್ಥಿಗಳಿಗೆ ಅವಶ್ಯಕವಾಗಿರುವ ಅಳವಡಿಸಬೇಕಾದ ಮೌಲ್ಯಗಳ ಬಗ್ಗೆ ಸಲಹೆ ನೀಡಿದರು. 

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ವಿಲಿಯಂ ಡಿಸೋಜಾ, ರಮೆಶ್ ಡಿ ನಾಯಕ್ ಹಾಗೂ ಸಿಎಒ ಡಾ ಬಿ ದೇವದಾಸ ಪೈ, ತ್ರಿಶಾ ಸಂಸ್ಥೆಯ ಪ್ರೊ ಗೌರಿ ಕಾಮತ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀದೇವಿ ಶೆಣೈ ಕಾರ್ಯಕ್ರಮ ನಿರೂಪಣೆ ಮಾಡಿ, ಅಪರ್ಣಾ ಜೊತೆಗೂಡಿ  ಪ್ರಾರ್ಥಿಸಿದರು. ಇಪ್ಪತ್ತೊಂದು ದಿನಗಳ ಅವಧಿಯ ಈ ಉಚಿತ ಸನಿವಾಸೀ ವಿಶೇಷ ತರಬೇತಿಯಲ್ಲಿ ಹೊರರಾಜ್ಯಗಳಿಂದ ಆಹ್ವಾನಿಸಲ್ಪಟ್ಟವರೂ ಸೇರಿ ಹಲವು ಅನುಭವೀ ಉಪನ್ಯಾಸರು ತರಬೇತಿ ನೀಡಲಿದ್ದಾರೆ. ಸಿ.ಎ. ಉಲ್ಲಾಸ್ ಕಾಮತ್ ರವರ ಯು.ಕೆ. ಆಂಡ್ ಕೊ ಮತ್ತು ತ್ರಿಶಾ ಕ್ಲಾಸಸ್ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಈ ತರಬೇತಿ ಯೋಜನೆಯ ಸಹಭಾಗಿಗಳಾಗಿರುತ್ತಾರೆ.  

LEAVE A REPLY

Please enter your comment!
Please enter your name here