ಫೇಮಸ್ ಯೂತ್ ಕ್ಲಬ್ ವತಿಯಿಂದ “ಏಕ್ ಪೇಡ್ ಮಾ ಕೆ ನಾಮ್” ಕಾರ್ಯಕ್ರಮ

0
89

ಮುಲ್ಕಿ : ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10ನೇ ತೋಕೂರು, ಹಳೆಯಂಗಡಿ ಪ್ರಾಯೋಜಕತ್ವದಲ್ಲಿ ಮೈ ಭಾರತ್ ಮಂಗಳೂರು, ದಕ್ಷಿಣ ಕನ್ನಡ, ರೋಟರಿ ಕ್ಲಬ್ ಬೈಕಂಪಾಡಿ ಇವರ ಜಂಟಿ ಆಶ್ರಯದಲ್ಲಿ ಏಕ್ ಪೇಡ್ ಮಾ ಕೆ ನಾಮ್ ಕಾರ್ಯಕ್ರಮವನ್ನು ಜು. ೨೦ರಂದು ಸಂಸ್ಥೆಯ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೇಮಸ್ ಯೂತ್ ಕ್ಲಬ್ಬಿನ ಗೌರವಾಧ್ಯಕ್ಷರಾದ ಗುರುರಾಜ್ ಎಸ್.ಪೂಜಾರಿಯವರು ವಹಿಸಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈ ಭಾರತ್ ಮಂಗಳೂರು ದಕ್ಷಿಣ ಕನ್ನಡ ಇದರ ಆಡಳಿತಾಧಿಕಾರಿ ಜಗದೀಶ್ ಕೆ. ಮಾತನಾಡಿ ತಾಯಿಯ ಹೆಸರಿನಲ್ಲಿ ಗಿಡ ನೆಟ್ಟು ತಾಯಿ ಸಮಾನವಾದ ಪ್ರಕೃತಿಯ ಋಣವನ್ನು ತೀರಿಸುವ ಕೆಲಸ ನಮ್ಮಿಂದ ಆಗಬೇಕಿದೆ ಎಂಬ ವಿಚಾರವನ್ನು ವ್ಯಕ್ತಪಡಿಸಿದ್ದರು.

ಮೈ ಭಾರತ್ ಮಂಗಳೂರು ಇದರ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ಯವರು ಕಾರ್ಯಕ್ರಮದಲ್ಲಿ ಹಣ್ಣು ಹಂಪಲುಗಳ ಗಿಡಗಳನ್ನು ವಿತರಣೆ ಮಾಡಿ ಪರಿಸರ ಜಾಗೃತಿಗಾಗಿ ಹಮ್ಮಿಕೊಂಡಿರುವ ಏಕ್ ಪೇಡ್ ಮಾ ಕೆ ನಾಮ್ ಅಭಿಯಾನದ ಉದ್ದೇಶಗಳ ಬಗ್ಗೆ ಹೇಳುತ್ತಾ ಜನರಲ್ಲಿ ಪರಿಸರ ಜಾಗೃತಿಯನ್ನು ಹೆಚ್ಚಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ರೋಟರಿ ಕ್ಲಬ್ ಬೈಕಂಪಾಡಿ ಇದರ ಅಧ್ಯಕ್ಷರಾದ ರೊ. ದಿನೇಶ್ ಎಲ್. ಬಂಗೇರರವರು ಮಾತನಾಡಿ, ಗಿಡಮರಗಳ ಪೋಷಣೆ ಮತ್ತು ಪರಿಸರ ಸ್ವಚ್ಛತೆಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಿ ಪ್ರಕೃತಿಯನ್ನು ಉಳಿಸಲು ಸಂಘಟಿತರಾಗಿ ಹೋರಾಡೋಣ ಎಂಬ ಅಭಿಪ್ರಾಯವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೈಕಂಪಾಡಿ ಇದರ ಕಾರ್ಯದರ್ಶಿ ರೊ. ಶಿವಪ್ರಸಾದ್ ಶೆಟ್ಟಿ, ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಸಂಪತ್ ಜೆ. ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೈಕಂಪಾಡಿ ಸಹಕಾರದೊಂದಿಗೆಕು. ಪ್ರೇಕ್ಷಾ ಎಂಬ ವಿದ್ಯಾರ್ಥಿನಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ರೂಪಾಯಿ ಹತ್ತು ಸಾವಿರದ ಚೆಕ್ಕನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಫೇಮಸ್ ಯೂತ್ ಕ್ಲಬ್ಬಿನ ಕಾರ್ಯದರ್ಶಿ ಮೋಹನ್ ದಾಸ್ ದೇವಾಡಿಗರವರು ಸ್ವಾಗತಿಸಿ , ಹಿಮಕರ್ ರವರು ಧನ್ಯವಾದವನ್ನು ಅರ್ಪಿಸಿದರು. ಭಾಸ್ಕರ್ ಅಮೀನ್ ತೋಕೂರುರವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here