ಮಾ.1ರಂದು ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

0
4

ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 1 ರವಿವಾರ ಏಕಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಈ ನಾಗಮಂಡಲೋತ್ಸವದಲ್ಲಿ 35ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ. ವಿಶೇಷವಾಗಿ ಈಗ ತೀರ ಅಪರೂಪವಾಗಿರುವ ತೆಂಗಿನ ಮಡಲಿನ ಬೃಹತ್ ಚಪ್ಪರ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಏಕಕಾಲಕ್ಕೆ ಎರಡು ಸಾವಿರ ಜನ ಊಟ ಮಾಡಬಹುದಾಗಿದೆ.

ಈಗಾಗಲೇ ನಿರೀಕ್ಷೆಗೂ ಮೀರಿ ಹೊರೆಕಾಣಿಕೆ ಬಂದಿದ್ದು, ದೇವಸ್ಥಾನ ವ್ಯಾಪ್ತಿಯ 14 ಗ್ರಾಮದ ಜನರ ಸಂಪೂರ್ಣ ಸಹಕಾರ, ಪಾಲ್ಗೊಳ್ಳುತ್ತಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಭಾಗವಹಿಸುತ್ತಿದ್ದಾರೆ.

ಕೋಟದ ಹಲವು ಮಕ್ಕಳ ತಾಯಿ ಅಮೃತೇಶ್ವರಿ ದೇವಸ್ಥಾನದಲ್ಲಿ ಈ ಹಿಂದೆ ಚತುಷ್ಪವಿತ್ರ ನಾಗಮಂಡಲೋತ್ಸವ ನಡೆದಿತ್ತು. ಈಗ ಎರಡನೇ ಬಾರಿಗೆ ನಾಗಮಂಡಲೋತ್ಸವ ನಡೆಯುತ್ತಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಆನಂದ್ ಸಿ.ಕುಂದರ್ ನೇತೃತ್ವದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ.

LEAVE A REPLY

Please enter your comment!
Please enter your name here