ವರದಿ ರಾಯಿ ರಾಜ್ ಕುಮಾರ್
ದ.ಕ.ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಮಂಗಳೂರಿನ ವಾರ್ಷಿಕ ಮಹಾ ಸಭೆ ಅಕ್ಟೋಬರ್ 14,2025 ರಂದು ಬಿಜೈ ಆನೆಗುಂಡಿ ರಸ್ತೆಯ ಕಚೇರಿಯಲ್ಲಿ ನಡೆಯಿತು. ವಿಧಿ 8 ರ ಪ್ರಕಾರ ವಿಶೇಷವಾಗಿ ಗೌರವಾಧ್ಯಕ್ಷ ಹುದ್ದೆಯಲ್ಲಿ ಕಳೆದ 20 ವರ್ಷದಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಮ್.ಜೆ.ಸಾಲ್ಯಾನ್ ನೇಮಕಗೊಂಡರು.ಅಧ್ಯಕ್ಷರಾಗಿ ಸುನಂದ ಕುಂಬ್ಳೆ ಕಾರ್ಯದರ್ಶಿಯಾಗಿ ಡಿ.ಆರ್.ಸುನಂದ ದಂಬೆಕೋಡಿ , ಖಜಾಂಚಿಯಾಗಿ ಜಯಪ್ರಕಾಶ್ ಜತೆ ಕಾರ್ಯದರ್ಶಿಯಾಗಿ ರಾಯಿ ರಾಜ್ ಕುಮಾರ್ ಹಾಗೂ ಇಂದ್ರಾವತಿ ಆಯ್ಕೆಯಾದರು. ಮಹಾಸಭೆಯಲ್ಲಿ ರಫೀಕ್ ಕುಕ್ಕಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಸುನಂದ ಕುಂಬ್ಳೆ ವಾರ್ಷಿಕ ವರದಿ ಮಾಡಿಸಿದರು ಖಜಾಂಚಿ ಜಯಪ್ರಕಾಶ್ ಲೆಕ್ಕ ಪತ್ರ ಮಂಡಿಸಿದರು.ಮುಂದಿನ ವರ್ಷದ ಕಾರ್ಯಕ್ರಮ ಹಾಗೂ ಅಂದಾಜು ವೆಚ್ಚದ ಬಗ್ಗೆ ಚರ್ಚೆ ನಡೆಯಿತು, ಡಿ.ಆರ್. ಸುನಂದ ದಂಬೆಕೋಡಿ ವಂದಿಸಿದರು.