ಮೂಡುಬಿದಿರೆ : ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯಾಗಿರುತ್ತದೆ.
ಅಧ್ಯಕ್ಷರಾಗಿ ಮಂಗಳೂರು ನಂತೂರಿನ ಡಾ. ಎನ್.ಎಸ್.ಎ.ಎಂ. ಪ.ಪೂ. ಕಾಲೇಜಿನ ಡಾ. ನವೀನ್ ಶೆಟ್ಟಿ ಕೆ., ಕಾರ್ಯದರ್ಶಿಯಾಗಿ ಮಂಗಳೂರು ಸರಕಾರಿ ಪಿಯು ಕಾಲೇಜಿನ ಮಮತಾ ಎ, ಖಜಾಂಚಿಯಾಗಿ ಬಂಟ್ವಾಳ ತಾಲೂಕು ವಿಟ್ಲ ಪಿಯು ಕಾಲೇಜಿನ ಎ.ಎಸ್ ಆದರ್ಶ, ಉಪಾಧ್ಯಕ್ಷರುಗಳಾಗಿ ಕಲ್ಲಬೆಟ್ಟು ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಡಾ. ಎಸ್ಎನ್ ವೆಂಕಟೇಶ ನಾಯಕ್, ಬೆಳ್ತಂಗಡಿ ಪುಂಜಾಲಕಟ್ಟೆ ಸರಕಾರಿ ಪಿಯು ಕಾಲೇಜಿನ ಡಾ ಸರೋಜಿನಿ ಆಚಾರ್, ಕಡಬ ಬೆಥನಿ ಪಿಯು ಕಾಲೇಜಿನ ಜಾರ್ಜ್ ಟಿ ಎಸ್, ಜತೆ ಕಾರ್ಯದರ್ಶಿಗಳಾಗಿ ಮಂಗಳೂರು ಕಂದಕ್ ನ ಬದ್ರಿಯಾ ಪಿಯು ಕಾಲೇಜಿನ ಸೀಮಾ ಎ.ಕೆ. ಆಯ್ಕೆಯಾಗಿರುತ್ತಾರೆ.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ