ಮಂಗಳೂರು ಪತ್ರಿಕಾಭವನ ಟ್ರಸ್ಟ್ ಗೆ ಪದಾಧಿಕಾರಿಗಳ ಆಯ್ಕೆ

0
130

ಮಂಗಳೂರು: ಪತ್ರಿಕಾಭವನ ಟ್ರಸ್ಟ್ ಮಂಗಳೂರು ಇದರ ಸರ್ವ ಸದಸ್ಯರ ಸಭೆ ಆ.19ರಂದು ಮಂಗಳವಾರ ಪತ್ರಿಕಾ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಪುಂಡಲೀಕ ಪೈ (ಅನ್ನು ಮಂಗಳೂರು) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಪ್ರಧಾನ ಕಾರ್ಯದರ್ಶಿಯಾಗಿ ರವಿ ಪೊಸವಣಿಕೆ ಆಯ್ಕೆಯಾದರೆ, ಹರ್ಷ ಖಜಾಂಚಿಯಾಗಿ ಪುನರಾಯ್ಕೆಯಾದರು.
ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವೇಣು ವಿನೋದ್ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಖಜಾಂಚಿ ಹರ್ಷ, ಟ್ರಸ್ಟ್ ಸದಸ್ಯರಾದ ಕೆ. ಆನಂದ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಅನ್ನು ಮಂಗಳೂರು, ರವಿ ಪೊಸವಣಿಕೆ, ಪುಪ್ಪರಾಜ್ ಬಿ. ಎನ್. ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಉಪಸ್ಥಿತರಿದ್ದರು.
ಕಳೆದ ಅವಧಿಯಲ್ಲಿ ಟ್ರಸ್ಟ್ನಿಂದ ಪತ್ರಕರ್ತರ ಆರೋಗ್ಯ ಸಮಸ್ಯೆಗೆ ನೆರವು ಮತ್ತು ಮೃತ ಪತ್ರಕರ್ತರ ಪರಿಹಾರವಾಗಿ  7.47  ಲಕ್ಷ ರೂ. ನೆರವನ್ನು ನೀಡಲಾಗಿದೆ ಹಾಗೂ ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವದ ವರ್ಷಾಚರಣೆಯ ಕಾರ್ಯಕ್ರಮಗಳಿಗೆ ಅನುದಾನವಾಗಿ ಟ್ರಸ್ಟ್ನಿಂದ 5 ಲಕ್ಷ ನೀಡಲಾಗಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here