ಆತ್ರಾಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ

0
39

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ ಯಲ್ಲಿ “ದ್ವಿ ಭಾಷಾ ಕಲಿಕಾ ಆಂಗ್ಲ ಮಾಧ್ಯಮ ತರಗತಿಯ ಉದ್ಘಾಟನಾ ಕಾರ್ಯಕ್ರಮವು ಪರೀಕ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಮೊಕ್ತೇಸರ ರಾದ ಶ್ರೀ ಉದಯರಾಜ್ ಹೆಗ್ಡೆಯವರ ಅದ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮ ಉದ್ಘಾಟನೆಯನ್ನು ವೇದಿಕೆಯಲ್ಲಿ ಉಪಸ್ಥಿತ ಅತಿಥಿ ಗಣ್ಯರು ನಡೆಸಿದರು.ವೇದಿಕೆಯಲ್ಲಿ ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀ ಕೃಷ್ಣ ಮೂರ್ತಿ ಪ್ರಭು, ಪಂಚಾಯತ್ ಅಧ್ಯಕ್ಷರಾದ ಶ್ರೀ ಹರೀಶ್ ಶೆಟ್ಟಿ, SDMC ಅಧ್ಯಕ್ಷೆ ಶ್ರೀಮತಿ ಸಬೀನಾ, ಲಯನ್ಸ್ ಸಂಪುಟ ಸದಸ್ಯ ಶ್ರೀ ಹರೀಶ್ ಹೆಗ್ಡೆ, ಜಿಲ್ಲಾ ಆಂಗ್ಲ ಮಾಧ್ಯಮ ವಿಭಾಗದ ನೋಡೆಲ್ ಅಧಿಕಾರಿ ಶ್ರೀ ಚಂದ್ರ ನಾಯ್ಕ್, ಶಿಕ್ಷಣ ಇಲಾಖೆಯ BRP ಶ್ರೀಮತಿ ಜಯಶೀಲಾ ರೋಟೆ, CRP ಶ್ರೀ ಪ್ರದೀಪ್ ಸರ್, ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಮುಂತಾದವರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿ ಸಮರ್ಥ ಶೆಟ್ಟಿ ಆಂಗ್ಲ ಭಾಷೆ ಯಲ್ಲಿ ಸ್ವಾಗತ ಮಾಡಿದರು. ವಿದ್ಯಾರ್ಥಿನಿ ಅನುಶ್ರೀ ಆಂಗ್ಲ ಭಾಷೆಯಲ್ಲಿ ಧನ್ಯವಾದವನಿತ್ತರು. ಶಾಲಾ ಮಕ್ಕಳಿಂದ ಪರಿಸರ ಜಾಗ್ರತಿ ಬಗ್ಗೆ ಇಂಗ್ಲಿಷ್ ನಲ್ಲಿ ಪ್ರಹಸನ ನಡೆಯಿತು. ಇಂಗ್ಲಿಷ್ ಭಾಷಾ ಒಂದನೇ ತರಗತಿ ಮಕ್ಕಳಿಗೆ ಹೂ ಕೊಟ್ಟು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗಂಗಾಧರ್ ಪ್ರಭು ಜಡ್ಡು ಇಸ್ಮಾಯಿಲ್ ಆತ್ರಾಡಿ,ಸೈಮಕಾಂತ್ ಶೆಟ್ಟಿ, ರವೀಂದ್ರ ನಾಥ ಹೆಗ್ಡೆ, ಬಾಲಕೃಷ್ಣ ಹೆಗ್ಡೆ,ಅಬ್ದುಲ್ ರಹಿಮಾನ್, ಮೋಹನ್ ದಾಸ್ ಆಚಾರ್, ಶ್ರೀಮತಿ ಶ್ಯಾಮಲಾ ಪ್ರಭು, ಶ್ರೀಮತಿ ಕೀರ್ತಿ ನಾಯಕ್, ಇರ್ಫಾನ್, ಶಿಕ್ಷಕಿ ಯರಾದ ಶ್ರೀಮತಿ ಜ್ಯೋತಿ, ಶಬನಾ ಪರ್ವೀನ್, ಶ್ರೀಮತಿ ಸುಹಾಸಿನಿ, ಶ್ರೀಮತಿ ವಿಮಲಾ ಶ್ರೀಮತಿ ಶಾರದಾ ಮಕ್ಕಳ ಪೋಷಕರು ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here