.ಉಜಿರೆ: ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸೆ. ೨೧ ರಂದು ಭಾನುವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥ ಕ್ಷೇತ್ರಕ್ಕೆ ಆಗಮಿಸಲಿದ್ದು ಕೀರ್ತಿಶೇಷ ಕಿನ್ಯಮ್ಮ ಯಾನೆ ಗುಣವತಿಅಮ್ಮ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ೭೦೦ ವಿದ್ಯಾರ್ಥಿಗಳಿಗೆ ೨೫ ಲಕ್ಷ ರೂ. ವಿದ್ಯಾರ್ಥಿ ಪ್ರೋತ್ಸಾಹಧನ ವಿತರಿಸಲಿದ್ದಾರೆ ಎಂದು ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ್ ಬಳ್ಳಾಲ್ ತಿಳಿಸಿದ್ದಾರೆ.
ಬಸದಿಯ ಆಡಳಿತ ಮೊಕ್ತೇಸರರಾಗಿದ್ದ ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣವತಿಅಮ್ಮನವರ ವಾರ್ಷಿಕ ಸ್ಮರಣಾರ್ಥ ಪೂರ್ವಾಹ್ನ ಗಂಟೆ ಏಳರಿಂದ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ೧೦೮ ಕಲಶಾಭಿಷೇಕ, ಮೂರು ಬಸದಿಗಳಲ್ಲಿ ನವಕಲಶಾಭಿಷೇಕ, ಮಹಾಪೂಜೆ ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ಅಲಂಕಾರಪೂಜೆ ನಡೆಯಲಿದೆ.
ಅಪರಾಹ್ನ ಮೂರು ಗಂಟೆಯಿAದ ಪೂಜ್ಯ ಸ್ವಾಮೀಜಿಯವರಿಂದ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ನಡೆಯಲಿದೆ.
ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ್ ಬಳ್ಳಾಲ್ ಅಧ್ಯಕ್ಷತೆ ವಹಿಸುವರು.
Home Uncategorized ಸೆ. 21: ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಬೆಳ್ತಂಗಡಿ ಬಸದಿಗೆ ಭೇಟಿ, ವಿದ್ಯಾ...