
ಶಿವಮೊಗ್ಗದ ಶರಾವತಿ ಮಹಿಳಾ ಮಂಡಳಿಯವರು ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಎರ್ಮಾಳು ಕುಮಾರಸ್ವಾಮಿ ಹಾಗೂ ಥೋಮಸ್ ಗೆ ಅವರ ಸಮಾಜ ಸೇವೆ ಹಾಗೂ ಕ್ರೀಡಾ ಸಾಧನೆಗೆ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಒಂದು ಕಾಲಿಲ್ಲದ ರಂಜನ್ ರಿಗೆ ವೀಲ್ ಚೇರ್ ನೀಡಿ ಆತನ ಬದುಕಿಗೆ ಆಸರೆ ಒದಗಿಸಲಾಯಿತು. ವೇದಿಕೆಯಲ್ಲಿ ಗೌರವಾಧ್ಯಕ್ಷ ಪುಷ್ಪ ಶೆಟ್ಟಿ, ಮಂಡಳಿಯ ನಿರ್ದೇಶಕರುಗಳು ಹಾಜರಿದ್ದರು. ಅಧ್ಯಕ್ಷೆ ಶಶಿಕಲಾ ಕೆ.ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ಶೋಭಾ ಯೋಗೇಂದ್ರ ಕಾರ್ಯಕ್ರಮ ನಿರ್ವಹಿಸಿದರು. ಗೀತಾ ಶೆಟ್ಟಿ ವಂದಿಸಿದರು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ