ಎಕ್ಸಲೆಂಟ್ ಸಿ. ಬಿ. ಎಸ್. ಇ. ಶಾಲೆಗೆ ಶೇ. 100% ಫಲಿತಾಂಶ

0
60

ಮೂಡುಬಿದಿರೆ : ಮೂಡುಬಿದಿರೆಯ ಕಲ್ಲಬೆಟ್ಟುಎಕ್ಸಲೆಂಟ್ ಸಿ. ಬಿ. ಎಸ್. ಇ. ಶಾಲೆಯ ಅಂತಿಮ ಪರೀಕ್ಷೆಯಲ್ಲಿ ಶೇ. 100% ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 20 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣ ರಾಗಿರುತ್ತಾರೆ. ಕು I ರುಚಿರಾ ಕುಂದರ್ ಶೇ. 91% ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಶೇ. 90% ಅಂಕ ಗಳಿಸಿದ ಕು I ಆಂಥಿಯಾ ಶೈನಾ ಮಿರಂಡಾ ದ್ವಿತೀಯ ಸ್ಥಾನ ಹಾಗೂ ಕು. I ಶಿಖಾ ಶೆಟ್ಟಿ ಶೇ 86.6 % ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಸಂಸ್ಥೆಯ ಅಧ್ಯಕ್ಷರು ಶ್ರೀಯುತ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿ ರಶ್ಮಿತಾ ಜೈನ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here