ನ. 7 ರಂದು ಎಕ್ಸಲೆಂಟ್ ಶೈಕ್ಷಣಿಕ ಕಟ್ಟಡ ಉದ್ಘಾಟನೆ

0
10


ವರದಿ ರಾಯಿ ರಾಜ ಕುಮಾರ

ರಾಷ್ಟ್ರಮಟ್ಟದ ರ್ಯಾಂಕ್ ಗಳನ್ನು ಬಗಲಿಗೆ ಹಾಕಿಕೊಂಡ ಗುರುಕುಲ ಮಾದರಿಯ ಶಿಕ್ಷಣವನ್ನು ಹದಿನಾಲ್ಕು ವರ್ಷಗಳ ಹಿಂದಿನಿಂದ ಹುಟ್ಟು ಹಾಕಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ನೂತನ ಶೈಕ್ಷಣಿಕ ಕಟ್ಟಡವನ್ನು ನಿರ್ಮಿಸಲಾಗಿದೆ. ಇದನ್ನು ನವೆಂಬರ್ 7ರಂದು ಆಂಧ್ರಪ್ರದೇಶದ ಗವರ್ನರ್, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ, ಎಸ್ ಅಬ್ದುಲ್ ನಜೀರ್ ಅವರು ಉದ್ಘಾಟಿಸಲಿರುವರು. ಸುಬ್ರಹ್ಮಣ್ಯ ಮಠಾಧೀಶರು ಆಶೀರ್ವಚನ ನೀಡಲಿದ್ದಾರೆ.
ಸುಮಾರು 50 ಎಕರೆಯಲ್ಲಿ ಎದ್ದು ನಿಂತಿರುವ ಎಕ್ಸಲೆಂಟ್ ವಿದ್ಯಾ ಸಂಸ್ಥೆ ಪ್ರಕೃತಿಯ ರಮಣೀಯವಾದ ಹಸಿರು ಸೌಂದರ್ಯದಿಂದ ಮತ್ತು ಶೂನ್ಯ ತ್ಯಾಜ್ಯ ಆವರಣವನ್ನು ಹೊಂದಿದ ಮೊದಲ ಸಂಸ್ಥೆ ಎನ್ನುವ ಗೌರವಕ್ಕೆ ಪಾತ್ರವಾಗಿದೆ. ಸುಮಾರು 3000 ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಸೌಲಭ್ಯದ ಪರಿಕರಗಳೊಂದಿಗೆ ಸಂಸ್ಕಾರ, ವ್ಯಕ್ತಿತ್ವ ವಿಕಸನ, ಇತ್ಯಾದಿ ಸಾಂಸ್ಕೃತಿಕ ಮೇರು ವ್ಯಕ್ತಿತ್ವವನ್ನು ನಿರ್ಮಿಸಲು ಶ್ರಮಿಸುತ್ತಿದೆ.


ಒಂದು ಕೋಟಿ ಬೆಲೆಯ ಸೋಲಾರ್ ಸೌಲಭ್ಯವನ್ನು ಉಪಯೋಗಿಸಿ ದಿನಕ್ಕೆ 800 ಯೂನಿಟ್ ಉತ್ಪಾದನೆಯನ್ನು ಮಾಡುವುದರ ಮೂಲಕವಾಗಿ ಹೆಚ್ಚಿನ ಸ್ವಯಕ್ತತೆಯನ್ನು ಗಳಿಸಿಕೊಳ್ಳಲಾಗಿದೆ. 52 ಕೊಠಡಿಗಳು ಒಂದೇ ನಿಯಂತ್ರಣದಲ್ಲಿ ಕಾರ್ಯಾಚರಿಸುತ್ತಿದ್ದು ಇಂಟರ್ ಆಕ್ಟಿಂಗ್ ಪ್ಯಾನಲ್ ಗಳು, ಸಿಸಿಟಿವಿಗಳು, ಸ್ಮಾರ್ಟ್ ಬೋರ್ಡ್ ವ್ಯವಸ್ಥೆ, ಸಂತೃಪ್ತಿಯ ಉಟೋಪಚಾರ, 650 ಕೊಠಡಿಗಳ ಹುಡುಗ ಹುಡುಗಿಯರ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, 24 ಗಂಟೆಗಳ ವೈದ್ಯಕೀಯ ಸಹಾಯ, ವಿಷಯ ಕೇಂದ್ರೀಕೃತ ಚಟುವಟಿಕೆಗಳು, ಮುಂಜಾನೆ 6.30 ರಿಂದ ರಾತ್ರಿ 10.30 ರ ತನಕ ನಿರಂತರ ಅಭ್ಯಾಸ ತರಗತಿಗಳು, ವಿಶಾಲ ಕ್ರೀಡಾಂಗಣ, ಸುಸಜ್ಜಿತ ವಾಚನಾಲಯ, ನಿವೃತ್ತ ಸೇನಾ ಧಿಕಾರಿಗಳಿಂದ ಶಿಸ್ತಿನ ಜೀವನ ಪದ್ಧತಿಯ ಪಾಠ ಇಲ್ಲಿಯ ಅತಿ ವಿಶಿಷ್ಟ ವೈಶಿಷ್ಟ್ಯಗಳಾಗಿವೆ.
ದೇಶ ವಿದೇಶದ ವಿದ್ಯಾರ್ಥಿಗಳು ವಿವಿಧ ಹಬ್ಬಗಳ ಆಚರಣೆಯನ್ನು ಮಾಡಿ ಸರ್ವಧರ್ಮ ಸಾಮರಸ್ಯದಲ್ಲಿ ಬೆಳೆಯುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ದೊರೆಯುವಂತೆ ಉತ್ತೇಜಿಸಲಾಗುತ್ತಿದೆ.
ನೂತನ ಶೈಕ್ಷಣಿಕ ಕಟ್ಟಡದಲ್ಲಿ 52 ವಿಶಾಲವಾದ ಕೊಠಡಿಗಳಿದ್ದು, ನಿಸರ್ಗದತ್ತ ವಾತಾವರಣವನ್ನು ಹೊಂದಿದೆ ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ 2026ರ ನೂತನ ಡೈರಿಯನ್ನು ಪತ್ರಕರ್ತ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಬಿಡುಗಡೆ ಮಾಡಿದರು. ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಸಂಪತ್ ಕುಮಾರ್, ಮಾಹಿತಿ ಅಧಿಕಾರಿ ಶರವು ವಿಜಯ್, ಹರೀಶ್ ಶೆಟ್ಟಿ ಹಾಜರಿದ್ದರು.
.

LEAVE A REPLY

Please enter your comment!
Please enter your name here