ವಿದ್ಯಾರ್ಥಿಗಳು ಸ್ವಂತ ಕೌಶಲ್ಯ ಬೆಳೆಸಿಕೊಂಡು, ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು. ಅಂತಹ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಕೆಲಸವನ್ನು ಮಾಡಿ ಸಾಧನಾ ಶಿಬಿರದಲ್ಲಿ ಮೆರೆಯಬೇಕು ಎಂದು ಪ್ರೋತ್ಸಾಹಕರ ಮಾತುಗಳನ್ನು ಎಸ್.ಕೆ.ಎಫ್. ಎಲಿಕ್ಸರ್ ನ ನಿರ್ವಹಣಾ ನಿರ್ದೇಶಕ ಡಾ. ರಾಮಕೃಷ್ಣ ಆಚಾರ್ ಮಹಾವೀರ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್, ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಪ್ರಾಂಶುಪಾಲ ಡಾ. ರಾಧಾಕೃಷ್ಣ ನೂತನ ವಿದ್ಯಾರ್ಥಿ ಸಂಘಕ್ಕೆ ಶುಭ ಹಾರೈಸಿದರು. ನಿವೃತ್ತರಾದ ಕಛೇರಿ ಸಿಬ್ಬಂದಿ ಕೃಷ್ಣಯ್ಯ ನಾಯ್ಕ ರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಕಳೆದ ವರ್ಷ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಪ್ರೊ. ಹರೀಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸಾಧಕರ ವಿವರವನ್ನು ಉಪನ್ಯಾಸಕರುಗಳಾದ ಸುವರ್ಣಲತಾ ಶೆಣೈ, ಪೂರ್ಣಿಮಾ, ಮಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಕ್ಷಿ ಎಚ್ ಶೆಟ್ಟಿ, ಉಪಾಧ್ಯಕ್ಷ ಮೊಹಮ್ಮದ್ ಜುನೈದ್ ಹಾಜರಿದ್ದರು. ಕಾರ್ಯದರ್ಶಿಗಳಾದ ಶಾಲಿನಿ ಪರಿಚಯ ಮಾಡಿದರು, ನವ್ಯಾ ಸ್ವಾಗತಿಸಿದರು, ಹರ್ಷಿಣಿ ಕಾರ್ಯಕ್ರಮ ನಿರ್ವಹಿಸಿದರು, ನಿವೇದಿತಾ ವಂದಿಸಿದರು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ