ಲಯನ್ಸ್ ಜಿಲ್ಲೆ 317-D ಇದರ 2025 – 26 ನೇ ಸಾಲಿನ ನಿಯೋಜಿತ ರಾಜ್ಯಪಾಲರಾದ ಕುಡುಪಿ ಅರವಿಂದ್ ಶೆಣೈಯವರು ಅಮೆರಿಕಾದ ಫ್ಲೋರಿಡಾ ದಲ್ಲಿ ಜರುಗಲಿರುವ 1೦7ನೇ ಅಂತಾರಾಷ್ಟ್ರೀಯ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವರ ಮಡದಿ ಮಮತಾ ಶೆಣೈ ಅವರ ಜೊತೆಗೆ ತೆರಳುತ್ತಿರುವ ಸಂಧರ್ಭದಲ್ಲಿ ಅವರ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಗರದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಜರುಗಿತು.
ಈ ಸಂಧರ್ಭದಲ್ಲಿ ಮಾಜಿ ರಾಜ್ಯಪಾಲರಾದ ಸಂಜಿತ್ ಶೆಟ್ಟಿಯವರು ಜಿಲ್ಲಾ ಲಾಂಛನವನ್ನು ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಪ್ರಸ್ತುತ ಜಿಲ್ಲಾ ರಾಜ್ಯಪಾಲರಾದ ಭಾರತಿ.ಬಿ.ಎಂ, ಪ್ರಥಮ ಉಪರಾಜ್ಯಪಾಲರಾದ ತಾರಾನಾಥ್ ಎಚ್.ಎಂ, ಪೂರ್ವ ರಾಜ್ಯಪಾಲರುಗಳು, ಲಯನ್ಸ್ ಗಣ್ಯರಾದ ಚಂದ್ರೇಗೌಡ, ಬಾಲಕ್ರಷ್ಣ ಹೆಗ್ಡೆ, ಚಂದ್ರಹಾಸ್ ರೈ, ಅಶೋಕ್ ಕುಮಾರ್, ನ್ಯಾನ್ಸಿ ಮಸ್ಕರೇನಸ್, ಜ್ಯೋತಿ ಶೆಟ್ಟಿ, ಓಸ್ವಾಲ್ಡ್ ಡಿಸೋಜಾ, ಶ್ರೀಧರ್ ರಾಜ್ ಶೆಟ್ಟಿ, ಹರೀಶ್ ಆಳ್ವಾ, ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಾಂತ್ ಶೆಟ್ಟಿ, ವಿಜಯ ವಿಷ್ಣು ಮಯ್ಯ ಹಾಗು ಸುದರ್ಶನ್ ಪಡಿಯಾರ್ ಕಾರ್ಯಕ್ರಮ ನಡೆಸಿಕೊಟ್ಟರು.