ಕುಂದಾಪುರ, ಉಡುಪಿಯ ಕೆನರಾ ಬ್ಯಾಂಕಿನ ವಿವಿಧ ಶಾಖೆಯಲ್ಲಿ 18 ವರ್ಷ ಸೇವೆ ಸಲ್ಲಿಸಿರುವ ಶ್ರೀಮತಿ ಸುಮತಿ ದಿನಾಂಕ 31-10-2025ರಂದು ಉಡುಪಿ ಕುಂದಾಪುರದ ಮುಖ್ಯ ಶಾಖೆಯಲ್ಲಿ ನಿವೃತ್ತಿ ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಶ್ರೀ ರಾಜು ಕೆ. ಅವರು ಶಾಲು ಹೊದಿಸಿ ಫಲ-ಪುಷ್ಪ ಸ್ಮರಣಿಕೆ ನೀಡಿ ಗೌರವಿಸಿದರು, ಈ ಸಂದರ್ಭದಲ್ಲಿ ವ್ಯವಸ್ಥಾಪಕರು ಶ್ರೀ ವೀರೇಶ ಹೂಗಾರ, ಶ್ರೀ ಹರೀಶ್ ದೇವಾಡಿಗ, ಅಧಿಕಾರಿಗಳು ಶ್ರೀ ನಿತಿನ್ ವರ್ಗೀಸ್, ಶ್ರೀ ಜಯಮುರ್ಗೆಶ, ಶ್ರೀ ಎ. ವೆಂಕಟಪ್ರಸಾದ, ಶ್ರೀಮತಿ ಗಾಯತ್ರಿ, ಶ್ರೀಮತಿ ಅಸ್ಮಿತಾ, ಸಿಬ್ಬಂದಿ ವರ್ಗ ಶ್ರೀ ಜಾನಿ, ಶ್ರೀ ಅನಿಲ, ಶ್ರೀ ಅವಿನಾಶ, ಶ್ರೀ ಸಂತೋಷ ಮತ್ತು ಕೆನರಾ ಬ್ಯಾಂಕಿನ ಅಧಿಕಾರಿಗಳಾದ HSBC ವಿಮೆ ವಲಯದ ನಯನ ಭಕ್ತ, ಸೋನಿಯಾ, ಚಂದ್ರ ನಾಯ್ಕ್, ಶವಾದ್ , ಶ್ರೀಮತಿ ಸುಮತಿ ಅವರ ಕುಟುಂಬಸ್ಥರು ಹಾಗೂ ನಿವೃತ್ತ ಸಿಬ್ಬಂದಿಯವರಾದ ಎಂ.ಆರ್ ಪೈ ಅಂಬಾಗಿಲು ಉಪಸ್ಥಿತರಿದ್ದರು.

