ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿಯಲ್ಲಿ ಕಳೆದ 9 ವರ್ಷಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಮುಚ್ಚೂರು ಗ್ರಾ.ಪಂ.ಗೆ ವರ್ಗಾವಣೆಗೊಂಡಿರುವ ರಕ್ಷಿತಾ ಡಿ. ಅವರಿಗೆ ಸನ್ಮಾನಿಸಿ, ಬೀಳ್ಕೊಡಲಾಯಿತು.
ನಿವೃತ್ತ ಶಿಕ್ಷಕ ತುಕ್ರಪ್ಪ ಕೆಂಬಾರೆ ಮಾತನಾಡಿ, ಇಲಾಖೆಯ ನಿಯಮವನ್ನು ಎಲ್ಲೂ ಉಲ್ಲಂಘಿಸಿದೆ, ಗ್ರಾಮಸ್ಥರಿಗೆ ಪ್ರಯೋಜನವಾಗುವ ಎಲ್ಲ ಕೆಲಸಗಳನ್ನು ನಿಷ್ಠೆಯಿಂದ ಪಿಡಿಒ ಕೆಲಸ ಮಾಡಿದ್ದಾರೆ. ಜನಸ್ನೇಹಿಯಾಗಿ ಕೆಲಸ ಮಾಡಿರುವುದು ಹೆಗ್ಗಳಿಕೆ ಎಂದರು.
ಗ್ರಾಪಂ ಅಧ್ಯಕ್ಷೆ ಅಮಿತಾ, ಉಪಾಧ್ಯಕ್ಷ ಪ್ರವೀಣ್ ಸಿಕ್ವೇರ, ಪಾಲಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನಿಲ್ ಪಿಂಟೊ, ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ ಮಾಜಿ ಉಪಾಧ್ಯಕ್ಷ ನಾಗೇಶ್.ಎಸ್, ಕಡಂದಲೆ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆ ಮುಖ್ಯ ಶಿಕ್ಷಕ ದಿನಕರ ಕುಂಬಾಶಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಗಣೇಶ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಮೋಹಿನಿ ಕುಮಾರಿ.ಎ, ಗ್ರಾಪಂ ಸದಸ್ಯರು, ಗ್ರಾಮಸ್ಥರು, ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು. ರಂಜಿತ್ ಭಂಡಾರಿ ನಿರೂಪಿಸಿದರು. ಸುರೇಶ್ ಪೂಜಾರಿ ಸ್ವಾಗತಿಸಿದರು.
ವರದಿ: ಜಗದೀಶ್ ಪೂಜಾರಿ ಕಡಂದಲೆ