ಮೇವು ಕೊಯ್ಯುವಾಗ ಹಾವು ಕಚ್ಚಿ ರೈತ ಸಾವು!

0
170

ದಾವಣಗೆರೆ: ಜಮೀನಿನಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ರೈತನೋರ್ವ ಮೃತಪಟ್ಟಿರುವ ಘಟನೆ ಮಂಗಳವಾರ (ಸೆ.9) ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹನುಮಂತಪ್ಪ (52) ಮೃತಪಟ್ಟ ರೈತ. ಎಂದಿನಂತೆ ಅವರು ತಮ್ಮ ಜಮೀನಿನಲ್ಲಿ ಜಾನುವಾರುಗಳಿಗೆ ಮೇವು ಕೊಯ್ಯಲು ಬೆಳಗ್ಗೆ ಹೋಗಿದ್ದರು. ಮೇವು ಕೊಯ್ಯುವ ಸಂದರ್ಭದಲ್ಲಿ ಹಾವು ಕಚ್ಚಿದೆ. ಆದರೆ, ಅವರು ಏನೋ ಕಚ್ಚಿದೆ ಎಂದು ಮೇವು ಕೊಯ್ಯುವ ಕೆಲಸ ಮುಂದುವರಿಸಿದ್ದಾರೆ.
ಹಾವು ಕಚ್ಚಿದ ವಿಷ ಮೈಯಲ್ಲ ಆವರಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಅಕ್ಕಪಕ್ಕದ ರೈತರು ಜಮೀನಿನಲ್ಲಿ ಕುಸಿದು ಬಿದ್ದಿರುವುದನ್ನು ಬಂದು ನೋಡಿದಾಗ ವಿಷ ದೇಹವೆಲ್ಲ ಆವರಿಸಿ ರೈತ ಅಸುನೀಗಿರುವುದು ಕಂಡು ಬಂದಿದೆ.

LEAVE A REPLY

Please enter your comment!
Please enter your name here