ಬಾಂಧವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಇನ್ನು ಮುಂದೆ ರೈತರು ತಮ್ಮ ‘ಸೆಂಟ್ರಲ್ ಫಾರ್ಮರ್ ಐಡಿ’ (Central Farmer ID) ಯನ್ನು ಪಡೆಯಲು ಯಾವುದೇ ಕಚೇರಿಗಳಿಗೆ ಅಲೆಯಬೇಕಿಲ್ಲ. ರೈತರು ಸ್ವತಃ ತಮ್ಮ ಮೊಬೈಲ್ ಮೂಲಕವೇ ಆನ್‌ಲೈನ್‌ನಲ್ಲಿ ಕೇವಲ ಎರಡು ಪ್ರಮುಖ ಹಂತಗಳಲ್ಲಿ ಇದನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ.
ಫ್ರೂಟ್ಸ್ (FRUITS) ಪೋರ್ಟಲ್ ಮೂಲಕ ನೋಂದಣಿ ಪ್ರಕ್ರಿಯೆ :
ರೈತರು ಮೊಟ್ಟಮೊದಲಿಗೆ ರಾಜ್ಯ ಸರ್ಕಾರದ ‘ಫ್ರೂಟ್ಸ್’ (FRUITS) ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಪ್ರಮುಖವಾಗಿ ಎರಡು ಹಂತಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಮೊದಲನೆಯದು ಸಿಟಿಜನ್ ಲಾಗಿನ್ (Citizen Login) ಪಡೆಯುವುದು ಹಾಗೂ ಎರಡನೆಯದು ಸೆಂಟ್ರಲ್ ಫಾರ್ಮರ್ ಐಡಿ ಸೃಷ್ಟಿಸುವುದು.
ಹಂತ-ಹಂತದ ವಿಧಾನ :
ವೆಬ್ ಸೈಟ್ ಗೆ ಭೇಟಿ ನೀಡಿ: ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಬ್ರೌಸರ್ ತೆರೆದು, ಕರ್ನಾಟಕ ಸರ್ಕಾರದ ಅಧಿಕೃತ ಫ್ರೂಟ್ಸ್ ವೆಬ್‌ಸೈಟ್ ಗೆ (https://fruits.karnataka.gov.in) ಭೇಟಿ ನೀಡಿ.
ಸಿಟಿಜನ್ ಲಾಗಿನ್ (Citizen Login): ಮುಖಪುಟದಲ್ಲಿ ಕಾಣುವ ‘ಸಿಟಿಜನ್ ಲಾಗಿನ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ, ಆ ಸಂಖ್ಯೆಗೆ ಬರುವ ಓಟಿಪಿ (OTP) ಯನ್ನು ಹಾಕಿ ಲಾಗಿನ್ ಆಗಿ.
ಸೆಂಟ್ರಲ್ ಫಾರ್ಮರ್ ಐಡಿ ಆಯ್ಕೆ: ಲಾಗಿನ್ ಆದ ನಂತರ ನಿಮ್ಮ ಪ್ರೊಫೈಲ್ ಡ್ಯಾಶ್ ಬೋರ್ಡ್ ತೆರೆಯುತ್ತದೆ. ಅಲ್ಲಿ ‘ಸೆಂಟ್ರಲ್ ಫಾರ್ಮರ್ ಐಡಿ ಕ್ರಿಯೇಟ್ ಮಾಡಿ’ (Create Central Farmer ID) ಎಂಬ ಲಿಂಕ್ ಅಥವಾ ಆಯ್ಕೆಯನ್ನು ಹುಡುಕಿ ಕ್ಲಿಕ್ ಮಾಡಿ.
ಇ-ಕೆವೈಸಿ (e-KYC) ಪ್ರಕ್ರಿಯೆ: ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸುವ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ರೈತರ ಸಹಮತಿ (Farmer Consent): ಇ-ಕೆವೈಸಿ ಪೂರ್ಣಗೊಂಡ ತಕ್ಷಣ, ಸರ್ಕಾರದ ಯೋಜನೆಗಳಿಗೆ ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಲು ಅನುಮತಿ ಕೇಳುವ ‘ರೈತರ ಸಹಮತಿ’ ಪುಟ ತೆರೆಯುತ್ತದೆ. ಅಲ್ಲಿನ ನಿಯಮಗಳನ್ನು ಓದಿ, ಬಾಕ್ಸ್ ಮೇಲೆ ಟಿಕ್ ಮಾಡುವ ಮೂಲಕ ನಿಮ್ಮ ಒಪ್ಪಿಗೆಯನ್ನು (Submit) ಸೂಚಿಸಿ.
ಐಡಿ ಸೃಷ್ಟಿ: ಈ ಮೇಲಿನ ಹಂತಗಳು ಮುಗಿದ ತಕ್ಷಣವೇ, ಪರದೆಯ ಮೇಲೆ ನಿಮ್ಮ ‘ಸೆಂಟ್ರಲ್ ಫಾರ್ಮರ್ ಐಡಿ’ ಯಶಸ್ವಿಯಾಗಿ ಸೃಷ್ಟಿಯಾದ ಕುರಿತು ಸಂದೇಶ ಬರುತ್ತದೆ ಹಾಗೂ ನಿಮ್ಮ ಐಡಿ ನಂಬರ್ ಕಾಣಿಸಿಕೊಳ್ಳುತ್ತದೆ. ಇದನ್ನು ಸ್ಕ್ರೀನ್‌ಶಾಟ್ ತೆಗೆದುಟ್ಟುಕೊಳ್ಳಿ ಅಥವಾ ಬರೆದಿಟ್ಟುಕೊಳ್ಳಿ.
ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ, ಮುಖ್ಯವಾಗಿ ಇ-ಕೆವೈಸಿ (e-KYC) ಮತ್ತು ರೈತರ ಸಹಮತಿ (Farmer Consent) ಎಂಬ ಈ ಎರಡು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರೆ ಸಾಕು ಯಶಸ್ವಿಯಾಗಿ ‘ಸೆಂಟ್ರಲ್ ಫಾರ್ಮರ್ ಐಡಿ’ ಕ್ರಿಯೇಟ್ ಆಗುತ್ತದೆ.
ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಿದ್ದಲ್ಲಿ ಮಾತ್ರ ಪ್ರೊಫೈಲ್‌ನಲ್ಲಿ ‘ಮೊಬೈಲ್ ನಂಬರ್’ ಆಯ್ಕೆ ಬಳಸಿ ಹೊಸ ನಂಬರ್‌ಗೆ ಓಟಿಪಿ ಪಡೆಯುವ ಮೂಲಕ ಅಪ್‌ಡೇಟ್ ಮಾಡಿಕೊಳ್ಳಬಹುದು, ಇಲ್ಲದಿದ್ದರೆ ಅದರ ಅಗತ್ಯವಿರುವುದಿಲ್ಲ.
ಈ ಮಾಹಿತಿಯು ರೈತರಿಗೆ ಸರ್ಕಾರದ ಬೆಂಬಲ ಬೆಲೆ, ಸಬ್ಸಿಡಿ, ಬರ ಪರಿಹಾರ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ನೇರವಾಗಿ ಹಾಗೂ ಶೀಘ್ರವಾಗಿ ಪಡೆಯಲು ಅತ್ಯಂತ ಉಪಯುಕ್ತವಾಗಿದೆ. ರೈತರು ಯಾವುದೇ ಮಧ್ಯವರ್ತಿಗಳಿಲ್ಲದೆ ಸ್ವತಃ ತಾವೇ ಡಿಜಿಟಲ್ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬಹುದು.

