ಕಾರ್ಕಳ ಸಮೀಪ ಕ್ರೂಸರ್‌-ಬಸ್ ನಡುವೆ ಭೀಕರ ಅಪಘಾತ : ಕಲಬುರಗಿ ಗಾಣಗಾಪುರದ ನಾಲ್ವರು ಮೃತ

0
71

ಉಡುಪಿ : ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕ್ರೂಸರ್‌(ತೂಫಾನ್) ವಾಹನ ಹಾಗೂ ಸಾರಿಗೆ ಬಸ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಚಾಲಕ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌. ತಾಲ್ಲೂಕಿನ ದೇವಲ ಗಾಣಗಾಪುರದ ಚೇತನ್ ಮಾದರ(18) ಮತ್ತು ರೋಹಿದಾಸ್ ಮಾದರ (19) ಹಾಗೂ ಮಲ್ಲಮ್ಮ (45) ಅದರಂತೆ ಚಾಲಕ ಮಾನಪ್ಪ (30) ಎಂಬುವವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ, ಅಪಘಾತದಲ್ಲಿ ‌ಕ್ರೂಸರ್ ವಾಹನ ನಜ್ಜುಗುಜ್ಜಾಗಿದೆ.

ತಾಲ್ಲೂಕಿನ ದೇವಲಗಣಗಾಪುರದ ಕುಟುಂಬವೊಂದರ 12 ಮಂದಿ ಕ್ರೂಸರ್ ವಾಹನ ಮೂಲಕ ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ಹೋಗಿದ್ದರು. ಶನಿವಾರ ಸಂಜೆ ಕಾರ್ಕಳದಿಂದ ಕ್ರೂಸರ್ ಮೂಲಕ ಉಡುಪಿಗೆ ಸಂಚರಿಸುವ ಮಧ್ಯದ ಕಾರ್ಕಳ ಹತ್ತಿರ ಬಸ್ಸಿಗೆ ಮತ್ತು ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ದುರ್ಘಟನೆಯಲ್ಲಿ ಇನ್ನುಳಿದ 9 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಉಡುಪಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ‌ ದಾಖಲಿಸಲಾಗಿದೆ. ಸಂಗೀತ ಎಂಬುವವರಿಗೆ ಒಂದು ಕೈ ಮತ್ತು ಕಾಲು ಕಟ್ಟಾಗಿದೆ ಎಂದು ತಿಳಿದ ಬಂದಿದೆ. ಈ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here