ಹಿರಿಯಡಕ ಜೈಲಿನಲ್ಲಿ ಸಹಕೈದಿಗೆ ಮಾರಾಣಾಂತಿಕ ಹಲ್ಲೆ; ಕೇಸು

0
30

ಉಡುಪಿ: ಹಿರಿಯಡಕ ಜಿಲ್ಲಾ ಕಾರಾಗೃಹದಲ್ಲಿ ಕೈದಿಯೊಬ್ಬ ಸಹಕೈದಿಗೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕಾರಾಗೃಹದಲ್ಲಿರುವ ವಿಚಾರಣಾ ಖೈದಿ ಇಸಾಕ್​ ಎಂಬುವವನು ಸಹಕೈದಿ ರವಿಚಂದ್ರನ್​ ಎಂಬಾತನ ಮೇಲೆ ಕೈಯಲ್ಲಿ ಸ್ಟೀಲ್​ ಚೆಂಬು ಸಿಕ್ಕಿಸಿಕೊಂಡು ಹಿಂದಿನಿಂದ ತಲೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಕರ್ತವ್ಯ ನಿರತ ಸಿಬ್ಬಂದಿ ವಿಚಾರಿಸಿದಾಗ ಈತ ರೂಮಿನಲ್ಲಿ ವಾಕಿಂಗ್​ ಮಾಡುತ್ತಿದ್ದಾನೆಂಬ ಕ್ಷುಲ್ಲಕ ಕಾರಣ ನೀಡಿದ್ದಾನೆ. ಹಲ್ಲೆಗೊಳಗಾದ ರವಿಚಂದ್ರನ್​ ಎಂಬಾತನನ್ನು ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಇಸಾಕ್​ ವಿನಾ ಕಾರಣ ಸಹಬಂಧಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದು ಕಾರಾಗೃಹ ನಿಯಮಗಳನ್ನು ಉಲ್ಲಂಘನೆ ಮಾಡಿರುವುದಾಗಿ ಕಾರಾಗೃಹ ಅಧೀಕ್ಷಕರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here