“ನಿನ್ನಿಕಲ್ಲ್ ಪಾದೆ, ನಮ್ಮ ಪೆರ್ಮೆ”
ಪಡುಬಿದ್ರಿ–ಕಾರ್ಕಳ ಮಾರ್ಗದ ಕೈಗಾರಿಕಾ ಪ್ರದೇಶದಲ್ಲಿ ಇರುವ ಕಾಲಭೈರವ–ತುಳುವೇಶ್ವರಿ ಸಾನಿಧ್ಯ ಹಾಗೂ ಸಂಬಂಧಿತ ಪುರಾತನ ಕುರುಹುಗಳು ತುಳುನಾಡಿನ ಅಪೂರ್ವ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿವೆ. ಈ ಅಮೂಲ್ಯ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಹೊಣೆಗಾರಿಕೆ ನಮ್ಮದಾಗಿದೆ ಎಂಬ ಅರಿವಿನೊಂದಿಗೆ, ತುಳುವರ್ಲ್ಡ್ ಫೌಂಡೇಶನ್ ವತಿಯಿಂದ ನಿನ್ನಿಕಲ್ಲು ಪಾದೆ ಹಾಗೂ ಪುರಾತನ ಸಾನಿಧ್ಯಗಳ ಸಂರಕ್ಷಣೆಯ ಕುರಿತು ಜನಜಾಗೃತಿ ಸಮಾಲೋಚನ ಸಭೆ ಆಯೋಜಿಸಲಾಗಿದೆ.
ಈ ಸಭೆ ಫೆಬ್ರವರಿ 1ರಂದು ಸಂಜೆ 3 ಗಂಟೆಗೆ ನಿನ್ನಿಕಲ್ಲು ಪಾದೆಯಲ್ಲಿ ನಡೆಯಲಿದೆ. ಸಭೆಯಲ್ಲಿ ಕಾಲಭೈರವ–ತುಳುವೇಶ್ವರಿ ಪರಂಪರೆಯ ಮಹತ್ವ, ನಿನ್ನಿಕಲ್ಲು ಪಾದೆಯ ಇತಿಹಾಸ, ಅವುಗಳ ಸಂರಕ್ಷಣೆ ಅಗತ್ಯತೆ, ಸ್ಥಳೀಯರ ಪಾತ್ರ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ.
ತುಳುನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಕಾಳಜಿ ಹೊಂದಿರುವ ಎಲ್ಲಾ ಜನರು ಈ ಸಭೆಯಲ್ಲಿ ಭಾಗವಹಿಸಿ, ಈ ಜನಾಂದೋಲನಕ್ಕೆ ಶಕ್ತಿ ನೀಡುವಂತೆ ಆಯೋಜಕರು ವಿನಂತಿಸಿದ್ದಾರೆ.

