ಫೆ.15 : “ಸರ್ವಕಲ ಸೇವಾ ಟ್ರಸ್ಟ್ (ರಿ) ಶಂಕರಪುರ” ಇದರ ಉದ್ಘಾಟನಾ ಸಮಾರಂಭ

0
41

ಶಂಕರಪುರ ಉಡುಪಿ ಇದೇ ಬರುವ ತಾರೀಕು 15-02-2026ನೇ ರವಿವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ “ಸರ್ವಕಲ ಸೇವಾ ಟ್ರಸ್ಟ್ (ರಿ) ಶಂಕರಪುರ” ಇದರ ಉದ್ಘಾಟನಾ ಸಮಾರಂಭವು ರೋಟರಿ ಭವನ ಶಂಕರ್ ಪುರ ಇಲ್ಲಿ ಜರಗಲಿರುವುದು .

ಇದರ ಉದ್ಘಾಟನೆಗೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ , ಶಂಕರಪುರ ಸೈನ್ಟ್ ಜೋನ್ ಚರ್ಚಿನ ಪ್ರಧಾನ ಗುರುಗಳಾದ ಡಾ. ಪ್ರಕಾಶ ಅನಿಲ್ ಕಸ್ತಲೇನೋ, ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಉಡುಪಿ ಇದರ ಧರ್ಮದರ್ಶಿಗಳಾದ ಶ್ರೀ ಶ್ರೀ ರಮಾನಂದ ಗುರೂಜಿ, ಸುಭಾಷ್ ನಗರ ಜಾಮಿಯಾ ಮಸೀದಿಯ ಕತಿಬರಾದ ಯಾಸುಫ್ ಜಾಕರಿ ವಿಟ್ಲ .

ಅತಿಥಿ ಗಳಾಗಿ ಇನ್ನಂಜೆ ಪಂಚಾಯತ್ ಅಧ್ಯಕ್ಷರು ಮಾಲಿನಿ ಶೆಟ್ಟಿ. ಕನ್ನಡ ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಕಥಾಬಿಂದು ಪ್ರಕಾಶನದ ಪಿ ವಿ ಕುಮಾರ್, ಚಲನ ಚಿತ್ರ ನಿರ್ದೇಶಕರು ಹಾಗೂ ಉದ್ಯಮಿಗಳಾದ ಸತ್ಯಂದ್ರ ಪೈ ಹಾಗೂ ವಿಶೇಷ ಅತಿಥಿಯಾಗಿ ಸಂಗೀತ ಹಾಗೂ ಚಿತ್ರ ನಿರ್ಮಾಪಕ ನಿರ್ದೇಶಕರಾದ ಲಯಕೋಕಿಲ ಬೆಂಗಳೂರು ಇವರುಗಳು ಹಾಜರಿರುವರು.

ಕಾರ್ಯಕ್ರಮದ ಉದ್ಘಾಟನಾ ಅಂಗವಾಗಿ ಕರೋಕೆ ಗಾಯನ ಸೀಸನ್ 2 ರಾಷ್ಟ್ರಮಟ್ಟದ ಸಂಗೀತ ಕಾರ್ಯಕ್ರಮ ನಡೆಯಲಿರುವುದು. ಈ ಕಾರ್ಯಕ್ರಮಕ್ಕೆ ಸರ್ವಕಲಾ ಸೇವಾ ಟ್ರಸ್ಟ್( ರಿ) ಶಂಕರಪುರ ಇದರ ಅಧ್ಯಕ್ಷರಾದ ನೀಮ ಲೋಬೋ. ಹಾಗೂ ಕಾರ್ಯದರ್ಶಿಯಾದ ಡಾ. ಜೋಸೆಫ್ ಲೋಬೊ ಖಜಾಂಚಿಯಾದ ಜನಿಷಾ ಲೋಬೊ ರವರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿರುತ್ತಾರೆ.

ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here