ದಾವಣಗೆರೆ : ದಾವಣಗೆರೆಯ ಓಂ ಚಂಡಿಕಾ ಸೇವಾ ಟ್ರಸ್ಟ್ನಿಂದ ಫೆಬ್ರವರಿ 15 ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ದಾವಣಗೆರೆಯ ಕೆ.ಎಸ್.ಆರ್.ಟಿ.ಸಿ. ಹೊಸ ಬಸ್ ನಿಲ್ದಾಣದ ಹಿಂಭಾಗ ಭರತ್ಸಿಂಗ್ ನಗರದ 1ನೇ ಮುಖ್ಯ ರಸ್ತೆ, 3ನೇ ತಿರುವಿನಲ್ಲಿ ಇರುವ ಚಂಡಿಕಾಶ್ರಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಗವನ್ ಶಿವಮಂತ್ರ ದೀಕ್ಷಾ ಮತ್ತು ಧ್ಯಾನ ಆಧ್ಯಾತ್ಮಿಕ ಪರಂಪರೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಡಾ. ಅಘೋರಿ ಚಿದಂಬರ ಯೋಗಿಯವರು ತಿಳಿಸಿದ್ದಾರೆ.
ಶಿವನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಆಧ್ಯಾತ್ಮಿಕ ಸಮಾರಂಭಕ್ಕೆ ಆಗಮಿಸಬೇಕಾಗಿ ಸಮಿತಿಯವರು ಪ್ರಕಟಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9380389236 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಟ್ರಸ್ಟ್ನ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.

