ಮೂಡುಬಿದಿರೆ : ಇಲ್ಲಿನ ಜೈನ ಮಠದ ಧವಳತ್ರಯ ಟ್ರಸ್ಟ್ (ರಿ) ಶ್ರೀ ದಿಗಂಬರ ಜೈನ ಮಠದ ಆಯೋಜನೆಯಲ್ಲಿ ಪೂಜ್ಯ ಸ್ವಸ್ತಿ ಶ್ರೀ ಡಾ .ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮಿಗಳ ಸಾರಥ್ಯದಲ್ಲಿ ಫೆಬ್ರವರಿ 26 ರಂದು ನಡೆಯಲಿರುವ ಭಾರತೀಯ ಸಂತ ಮಹಾಪರಿಷತ್ತಿನ ಪ್ರಾಂತೀಯ ಸಂತ ಸಮ್ಮೇಳನದ ಅಂಗವಾಗಿ ಸಂತ ಸಮ್ಮೇಳನ ಸಮಿತಿಯ ಪದಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ .ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ ಸಮ್ಮೇಳನಕ್ಕೆ ಅವರನ್ನು ಆಮಂತ್ರಿಸಲಾಯಿತು.ಈ ಸಂದರ್ಭದಲ್ಲಿ ಎಸ್ ಕೆ ಡಿ ಆರ್ ಡಿ ಪಿ ಯ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್,ಮಹಾವೀರ ಅಜ್ರಿ, ಡಾ.ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಸಹಿತ ಸಂತ ಸಮ್ಮೇಳನ ಸ್ವಾಗತ ಸಮಿತಿಯ ಸಂಚಾಲಕ ಎಂ ಬಾಹುಬಲಿ ಪ್ರಸಾದ್,ಕಾರ್ಯದರ್ಶಿ ಎಂ ಶಾಂತರಾಮ ಕುಡ್ವ,ಜOಟೀ ಕಾರ್ಯದರ್ಶಿಗಳಾದ ಕೆ.ಶಿವ ಭಂಡಾರ್ಕರ್ ಮತ್ತು ಎಂರಾಘವೇಂದ್ರಭಂಡಾರ್ಕರ್, ಭಾರತೀಯ ಸಂತ ಮಹಾಪರಿಷತ್ತಿನ ಸಂತ ಸಂಪರ್ಕ ಸಂಚಾಲಕರಾದ ಆಕಾಶ್ ವಿಶ್ವಾಮಿತ್ರ,ಕೊಪ್ಪದ ಸೋಮಯಾಜಿ ದಂಪತಿಗಳು ಉಪಸ್ಥಿತರಿದ್ದರು.

