
ಬೆಂಗಳೂರು : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಮತ್ತು ಮೌಢ್ಯತೆಯನ್ನು ಹೋಗಲಾಡಿಸಲು ಫೆಬ್ರವರಿ 28 ರಂದು ನಡೆಯಲಿರುವ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯ ಅಂಗವಾಗಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಅಂದು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕಕಾಲದಲ್ಲಿ ‘ವೈಜ್ಞಾನಿಕ ಮನೋಭಾವನೆ ಹಾಗೂ ಮಾನವೀಯ ಮೌಲ್ಯಗಳ ಪ್ರತಿಜ್ಞಾ ವಿಧಿ’ ಸ್ವೀಕರಿಸುವುದು ಕಡ್ಡಾಯ ಎಂದು ಆದೇಶಿಸಿದೆ .
ಪ್ರಮುಖ ಅಂಶಗಳು :
ವೈಜ್ಞಾನಿಕ ಮನೋಭಾವ: ಸಂವಿಧಾನದ 51 A (h) ವಿಧಿಯ ಅನ್ವಯ ವಿದ್ಯಾರ್ಥಿಗಳಲ್ಲಿ ವೈಚಾರಿಕತೆಯನ್ನು ಬೆಳೆಸುವ ಉದ್ದೇಶ.
ಮೌಢ್ಯ ನಿರ್ಮೂಲನೆ : ಯಾವುದೇ ವಿಷಯವನ್ನು ಪ್ರಶ್ನೆ ಮಾಡದೆ ಒಪ್ಪಿಕೊಳ್ಳಬಾರದು ಮತ್ತು ಅಂಧಕಾರವನ್ನು ದೂರ ಮಾಡಬೇಕು ಎಂಬ ಆಶಯ.
ಏಕಕಾಲದಲ್ಲಿ ಆಚರಣೆ: ರಾಜ್ಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಈ ಪ್ರತಿಜ್ಞಾ ವಿಧಿ ನಡೆಯಲಿದೆ.
