ಫೆ.28 : ತುಳು ಅಕಾಡೆಮಿಯಲ್ಲಿ ಬರಹಗಾರರ ಸಭೆ

0
10

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪ್ರಸ್ತಕ ಸಾಲಿನ ಪುಸ್ತಕ ಪ್ರಕಟಣೆಯ ಬಗ್ಗೆ ಸಮಾಲೋಚನೆ ನಡೆಸುವ ಸಲುವಾಗಿ ತುಳು ಬರಹಗಾರರ ಸಭೆಯನ್ನು ಮಂಗಳೂರಿನ ಉರ್ವಸ್ಟೋರ್ ನ ತುಳು ಭವನದಲ್ಲಿ ಶನಿವಾರ ಸಂಜೆ 4 ಗಂಟೆಗೆ ಆಯೋಜಿಸಿದೆ.

ಈ ಸಭೆಯಲ್ಲಿ ಮಂಗಳೂರು , ಸುರತ್ಕಲ್, ಮುಲ್ಕಿ, ಉಳ್ಳಾಲ ವ್ಯಾಪ್ತಿಯ ತುಳು ಬರಹಗಾರರು ಪಾಲ್ಗೊಳ್ಳುವರು . ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮುಂದಿನ ದಿನಗಳಲ್ಲಿ ತುಳು ಲೇಖಕರ ಸಮಾಲೋಚನಾ ಸಭೆ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here