ಗೃಹರಕ್ಷಕ ನೇಮಕಾತಿ ವೇಳೆ ಪ್ರಜ್ಞೆ ತಪ್ಪಿದ ಮಹಿಳಾ ಅಭ್ಯರ್ಥಿ: ಆ್ಯಂಬುಲೆನ್ಸ್‌ನಲ್ಲಿ ಸಾಮೂಹಿಕ ಅತ್ಯಾಚಾರ!

0
146

ಪಾಟ್ನಾ: ಬಿಹಾರದ ಬೋಧ್ ಗಯಾದಲ್ಲಿ ಗೃಹರಕ್ಷಕ ನೇಮಕಾತಿಯ ಭಾಗವಾಗಿ ನಡೆದ ಓಟದ ಸಂದರ್ಭದಲ್ಲಿ 26 ವರ್ಷದ ಮಹಿಳಾ ಅಭ್ಯರ್ಥಿ ಮೂರ್ಛೆ ಹೋಗಿದ್ದರು. ಪ್ರಜ್ಞೆ ತಪ್ಪಿದ ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆ್ಯಂಬುಲೆನ್ಸ್‌ನೊಳಗೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಚಾಲಕ ಮತ್ತು ತಂತ್ರಜ್ಞನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ್ಯಂಬುಲೆನ್ಸ್ ಚಲಾಯಿಸುತ್ತಿದ್ದ ಗಯಾದ ಉಟ್ರೆನ್ ಗ್ರಾಮದ ವಿನಯ್ ಕುಮಾರ್ ಮತ್ತು ನಳಂದ ಜಿಲ್ಲೆಯ ಚಂದನ್‌ಪುರ ಗ್ರಾಮದ ಅಜಿತ್ ಕುಮಾರ್ ಅವರನ್ನು ಆರೋಪಿಗಳು ಎಂದು ಪೊಲೀಸರು ಗುರುತಿಸಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಬೇಕಾಗುತ್ತದೆ ಎಂದು ಹೋಮ್ ಗಾರ್ಡ್ ನೇಮಕಾತಿ ಸ್ಥಳದಲ್ಲಿ ಆ್ಯಂಬುಲೆನ್ಸ್ ಅನ್ನು ನಿಲ್ಲಿಸಲಾಗಿತ್ತು. ನೇಮಕಾತಿಗೆ ಮಹಿಳಾ ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರೂ ಆ್ಯಂಬುಲೆನ್ಸ್‌ನಲ್ಲಿ ಮಹಿಳಾ ಸಿಬ್ಬಂದಿ ಇರಲಿಲ್ಲ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ. ಬೋಧ್ ಗಯಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 70(1)ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here