ತೆನೆ ಹಬ್ಬದ ಪ್ರಯುಕ್ತ ಇಂದು ಸಂತ ಲೋರೆನ್ಸ್ ಬಸಿಲಿಕಾದಲ್ಲಿ ಬಲಿಪೂಜೆಯು ನಡೆಯಿತು. ಬಲಿಪೂಜೆಯನ್ನು ವಂದನೀಯ ಧರ್ಮಗುರುಗಳಾದ ರೋಬಿನ್ ಸಾಂತುಮಾಯೆರ್ ನೆರವೇರಿಸಿದರು. ಬಸಿಲಿಕಾದ ಡೈರೆಕ್ಟರ್ ವಂದನೀಯ ಧರ್ಮಗುರುಗಳಾದ ಫಾ. ಆಲ್ಬನ್ ಡಿಸೋಜ, ಫಾ. ರೋಮನ್ ಮಸ್ಕರೇನಸ್ , ಫಾ. ಆಂಟನಿ, ಫಾ. ಆನಂದ್ ಇವರು ಉಪಸ್ಥಿತರಿದ್ದರು. ಮೇರಿ ಮಾತೆಯ ಮೆರವಣಿಗೆಯನ್ನು ನೆರವೇರಿಸಲಾಯಿತು.

