ಬೀಡಿ ಕಾರ್ಮಿಕರ 2024 ಏಪ್ರಿಲ್ 1ರಿಂದ ಅನ್ವಯವಾಗುವ ಅಧಿಸೂಚನೆಯಂತೆ 2018 ರಿಂದ 24ರ ವರೆಗೆ ಬಾಕಿ ಇರುವ ಕನಿಷ್ಠ ಕೂಲಿ ಮೊತ್ತವನ್ನು ಪಾವತಿಸಬೇಕೆಂದು ಆಗ್ರಹಿಸಿ ಬೀಡಿ ಕೆಲಸಗಾರರ ಕ್ರಿಯಾ ಸಮಿತಿ ಮೂಡುಬಿದಿರೆ ಟೆಲಿಫೋನ್ ಬೀಡಿ ಡಿಪೋ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ, ಬಾಲಕೃಷ್ಣ ಶೆಟ್ಟಿ, ಜಿಲ್ಲಾಧ್ಯಕ್ಷ ವಸಂತ ಆಚಾರಿ ಮಾತನಾಡಿ 2018 ರಿಂದ 24ರ ವರೆಗಿನ ಬಾಕಿ ಮೊತ್ತವನ್ನು ರಾಜ್ಯ ಸರ್ಕಾರದ ಆದೇಶದಂತೆ ತಕ್ಷಣ ಪಾವತಿಸಬೇಕೆಂದು ಆಗ್ರಹಿಸಿದರು. ಬೀಡಿ ಕಾರ್ಮಿಕರಿಗೆ ಮಾರಕವಾದ ಅಂಶಗಳನ್ನು ತೆಗೆದು ಹಾಕಬೇಕು ಎಂದೂ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷೆ ರಮಣಿ, ಲಕ್ಷ್ಮಿ, ಕರುಣಾಕರ, ಬೇಬಿ, ಪದ್ಮಾವತಿ, ಯಶವಂತಿ, ಕಲ್ಯಾಣಿ, ಕೃಷ್ಣಪ್ಪ ಹಾಗೂ ಇತರರು ಹಾಜರಿದ್ದರು. ಪ್ರತಿಭಟನೆಗೆ ಮೊದಲು ಹಳೆ ಪೊಲೀಸು ಠಾಣೆಯಿಂದ ಹಕ್ಕೊತ್ತಾಯ ಮೆರವಣಿಗೆ ನಡೆಯಿತು.
ವರದಿ -ರಾಯಿ ರಾಜ ಕುಮಾರ
.