ಶಿರ್ತಾಡಿ: ಶಿರ್ತಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಾಬಾರ್ಡ್, ಕೆನರಾ ಬ್ಯಾಂಕ್, ಕೆನರಾ ಫೈನಾನ್ಷಿಯಲ್ ಅಡ್ವೈಸರಿ ಟ್ರಸ್ಟ್ ಹಾಗೂ ಫೈನಾನ್ಷಿಯಲ್ ಲಿಟರಸಿ ಸೆಂಟರ್ ಅಮೂಲ್ಯ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ನಾಬಾರ್ಡ್‌ನ ಡಿಡಿಎಂ ಹಾಗೂ ಎಜಿಎಂ ಸಂಗೀತಾ ಎಸ್. ಕಾರ್ತಾ ಅವರು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಹಣಕಾಸು ಹಾಗೂ ಡಿಜಿಟಲ್ ಸಾಕ್ಷರತೆ ವ್ಯಕ್ತಿಯ ಜೀವನಮಟ್ಟ ಸುಧಾರಣೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಅತ್ಯಂತ ಅಗತ್ಯವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಪಿಡಿಓ ಶ್ರೀಮತಿ ಆಶಾಲತಾ ಎಚ್., ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕ ರವಿನಾ ಬಂಗೇರ, ಸಂಜೀವಿನಿ ಜಿ.ಪಿ ಮಟ್ಟದ ಫೆಡರೇಷನ್ ಅಧ್ಯಕ್ಷೆ ಸವಿತಾ ಬಂದಾರಿ, ಸಿಡಿಪಿಓ ಕಚೇರಿ ಮೇಲ್ವಿಚಾರಕಿ ಶುಭಾ ಹಾಗೂ ಎನ್‌ಆರ್‌ಎಲ್‌ಎಂ ಕ್ಲಸ್ಟರ್ ಮೇಲ್ವಿಚಾರಕಿ ಶ್ರೀಮತಿ ಪ್ರಜ್ವತ ಅವರು ಉಪಸ್ಥಿತರಿದ್ದರು.
ಫೈನಾನ್ಷಿಯಲ್ ಲಿಟರಸಿ ಸೆಂಟರ್ ಅಮೂಲ್ಯ, ಮಂಗಳೂರು ಇವರ ಹಣಕಾಸು ಸಾಕ್ಷರತಾ ಸಲಹೆಗಾರ ಲತೇಶ್ ಬಿ. ಅವರು ಬ್ಯಾಂಕಿಂಗ್ ಸೇವೆಗಳು, ಡಿಜಿಟಲ್ ವ್ಯವಹಾರಗಳು, ಉಳಿತಾಯ ಹಾಗೂ ಹಣಕಾಸು ಭದ್ರತೆ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮವು ಗೀತಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾಗಿ, ರೇಖಾ ಅವರ ಸ್ವಾಗತ ಭಾಷಣ, ಪ್ರತಿಭಾ ಅವರ ನಿರೂಪಣೆ ಹಾಗೂ ಮಮತಾ ಅವರ ಧನ್ಯವಾದ ಭಾಷಣದೊಂದಿಗೆ ಸಮಾಪ್ತಿಯಾಯಿತು.

