ಅಕ್ಷಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ “ಎಲೈಟ್” ಆಂತರಿಕ ವಿನ್ಯಾಸ ಸಂಘ ಹಾಗೂ ಐಕ್ಯೂಎಸಿ ಸಹಭಾಗಿತ್ವದಲ್ಲಿ ಆಂತರಿಕ ವಿನ್ಯಾಸ ವಿಭಾಗದ ವಿದ್ಯಾರ್ಥಿಗಳಿಗೆ “ಆರ್ಥಿಕ ಸಾಕ್ಷರತೆ” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಕ್ಷಯ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಕಿಶೋರ್ ಕುಮಾರ್ ರೈ ಕೆ, ಕಾರ್ಯಕ್ರಮಕ್ಕೆ ಚಾಲನೆ ನೀಡಿ , ಆರ್ಥಿಕ ಸಾಕ್ಷರತೆಯ ವ್ಯಾಪ್ತಿಗೆ ಬರುವ ಕೌಶಲ್ಯಗಳಲ್ಲಿ ಮನೆಯ ಬಜೆಟ್, ಸಾಲ ನಿರ್ವಹಣೆ, ಹಣಕಾಸು ಉತ್ಪನ್ನಗಳನ್ನು ಮೌಲ್ಯಮಾಪನ ಮಾಡುವುದು, ಹೂಡಿಕೆಗಳನ್ನು ಆಯ್ಕೆ ಮಾಡುವುದು ಮತ್ತು ಇನ್ನೂ ಹೆಚ್ಚಿನ ವಿಚಾರಗಳ ಬಗ್ಗೆ ವಿವರಿಸಿ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರಗಳ ಮೂಲಕ ಉತ್ತಮ ಕಾರ್ಯಗಾರವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷರು ಆಂತರಿಕ ವಿನ್ಯಾಸ ವಿಭಾಗದ ಮುಖ್ಯಸ್ಸ್ಥರು ಹಾಗೂ ಕಾಲೇಜಿನ ಉಪಪ್ರಾಂಶುಪಾಲರಾದ ರಕ್ಷಣ ಟಿ. ಆರ್ ಪ್ರಾಸ್ತಾವಿಕ ನುಡಿ ನುಡಿದರು. ವಿಭಾಗದ ಉಪನ್ಯಾಸಕರಾದ ಕಾವ್ಯ ಹಾಗೂ ವಿಸ್ಮಯ ಉಪಸ್ಥಿತರಿದ್ದರು.
ಆಂತರಿಕ ವಿನ್ಯಾಸ ವಿಭಾಗದ ತೃತೀಯ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು, ಎಲೈಟ್ ಸಂಘದ ಅಧ್ಯಕ್ಷ ವಿದ್ಯಾರ್ಥಿ ಸೃಜನ್ ಅಥಿತಿಗಳನ್ನು ಸ್ವಾಗತಿಸಿ,, ಪ್ರಥಮ ವಿಭಾಗದ ವಿದ್ಯಾರ್ಥಿನಿ ದುರ್ಗಲಕ್ಷ್ಮಿ ವಂದಿಸಿದರು. ತೃತೀಯ ವಿಭಾಗದ ಸ್ಫೂರ್ತಿ ಕಾರ್ಯಕ್ರಮ ನಿರೂಪಿಸಿದರು.

