ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಶಿಬಿರ ʻಯುರೇಕಾ – 2026ʼ ರ ಪ್ರಥಮ ದಿನದ ಅವಧಿಗಳನ್ನು ಬೆಂಗಳೂರಿನ ಶೈಕ್ಷಣಿಕ ಸಲಹೆಗಾರರಾದ ರಾಜೇಶ್ಭಟ್ ಇವರು ನಡೆಸಿಕೊಟ್ಟರು.
ಪೂರ್ವಾಹ್ನದ ಅವಧಿಯಲ್ಲಿ ಗಣಿತಶಾಸ್ತ್ರದ ಹಲವಾರು ವಿಷಯಗಳನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗುವಂತಹ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ನೀಡಿದರು.

ಅಪರಾಹ್ನದ ಬಳಿಕ ಹಲವು ಆಸಕ್ತಿದಾಯಕ ವೈಜ್ಞಾನಿಕ ಪರಿಕಲ್ಪನೆಗಳ ಪರಿಚಯ, ನಿತ್ಯ ಜೀವನದಲ್ಲಿ ಅವುಗಳ ಬಳಕೆ ಮುಂತಾದ ವಿಷಯಗಳ ಮಾಹಿತಿಗಳನ್ನು ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

