ಮೂಡುಬಿದಿರೆ: ಹೃದ್ರೋಗ ತಡೆಯಲು ಹಾಗೂ ಬುದ್ದಿಮತ್ತೆ ಮೀನು ಸಹಕಾರಿ. ಉತ್ತಮ ಪೌಷ್ಠಿಕಾಂಶವಿರುವ ಮೀನಿಗೆ ಕರಾವಳಿ ಮಾತ್ರವಲ್ಲ ಬೇರೆ ಪ್ರದೇಶಗಳಲ್ಲೂ ಬೇಡಿಕೆ ಹೆಚ್ಚಿದೆ. ಒಳನಾಡು ಮೀನುಗಾರಿಕೆ, ಮೀನು ಕೃಷಿ ಇಂದು ಹೆಚ್ಚು ಪ್ರಚಲಿತದಲ್ಲಿದೆ. ಉತ್ತಮ ವಿಧಾನದಲ್ಲಿ ತಂತ್ರಜ್ಞಾನವನ್ನು ಅರಿತು ವೈಜ್ಞಾನಿಕ ಮಾದರಿಯಲ್ಲಿ ಮೀನು ಕೃಷಿ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು. ಮೀನು ಮಾತ್ರವಲ್ಲ ಯಾವುದೇ ಕೃಷಿ ಮಾಡುವ ಮೊದಲು ಆರ್ಥಿಕ ಲೆಕ್ಕಾಚಾರ ಮಾಡುವುದರಿಂದ ಉತ್ತಮ ಕೃಷಿಕರಾಗಲು ಸಾಧ್ಯ ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ್ ಮಗದ ಹೇಳಿದರು.
ದ.ಕ ಮೀನುಗಾರಿಕಾ ಇಲಾಖೆ, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯ ಇವರ ಸಹಭಾಗಿತ್ವದಲ್ಲಿ ಶ್ರೀರಾಜ್ ಮತ್ಸ್ಯ ಫಾರ್ಮ್ ಪಣಪಿಲ ಸಹಯೋಗದಲ್ಲಿ ಪಣಪಿಲ ಕೊಟ್ಟಾರಿಬೆಟ್ಟುವಿನಲ್ಲಿ ಮೀನು ಕೃಷಿಕರ ದಿನಾಚರಣೆಯ ಪ್ರಯುಕ್ತ ಎರಡು ದಿನಗಳು ನಡೆಯುವ ಮತ್ಸ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಲಕೃಷಿ ತಜ್ಞ ಹೊನ್ನಾ ಮೀನು ಕೃಷಿ ಬಗ್ಗೆ ಮಾಹಿತಿ ನೀಡಿದರು.
ದರೆಗುಡ್ಡೆ ಗ್ರಾಪಂ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಅಧ್ಯಕ್ಷತೆವಹಿಸಿದರು. ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ದಿಲೀಪ್ ಕುಮಾರ್, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ವೈ ಎನ್ ಲಿಂಗನಗೌಡ, ದರೆಗುಡ್ಡೆ ಗ್ರಾಪಂ ಸದಸ್ಯರಾದ ಮುನಿರಾಜ ಹೆಗ್ಡೆ, ತುಳಸಿ ಮೂಲ್ಯ, ಉದ್ಯಮಿ ಹೇಮಾ ಕೆ.ಕೆ ಪೂಜಾರಿ, ಕೃಷಿಕರಾದ ಹರಿಯಪ್ಪ ಕೋಟ್ಯಾನ್, ದೇವರಾಜ್ ಕೋಟ್ಯಾನ್, ಅಳಿಯೂರು ಶಾಲಾ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ,
ರಾಜೇಶ್ ಕೋಟ್ಯಾನ್ ಸ್ವಾಗತಿಸಿ ನಿರೂಪಿಸಿದರು. ಪ್ರಭ ರಾಜೇಂದ್ರ ಕೋಟ್ಯಾನ್
ರಾಜೇಶ್ ಕೋಟ್ಯಾನ್ ನಿರೂಪಿಸಿದರು. ಪ್ರಭ ರಾಜೇಂದ್ರ ಕೋಟ್ಯಾನ್ ವಂದಿಸಿದರು.